
ನಾವು ಕಾಶ್ಮೀರಿ ಸಹೋದರರ ಬಲಿದಾನ ಮರೆಯುವಂತಿಲ್ಲ. ಭಾರತ ಆಕ್ರಮಿಸಿರುವ ಜಮ್ಮು- ಕಾಶ್ಮೀರದ ಜನತೆಯ ಜತೆ ಗಟ್ಟಿಯಾಗಿ ನಿಲ್ಲುತ್ತೇವೆ. ಕಾಶ್ಮೀರಿ ಜನರ ದೃಢ ವಿಶ್ವಾಸಕ್ಕಾಗಿ ನಾವು ಅವರ ಪರ ನಿಲ್ಲುತ್ತೇವೆ.ಎಂದು ಆಸಿಮ್ ಮುನೀರ್ ಹೇಳಿದ್ದಾರೆ
ಎರಡೂ ರಾಷ್ಟ್ರಗಳು ಇತ್ತೀಚೆಗೆ ಪರಸ್ಪರ ಯುದ್ಧ ಮಾಡುವ ಮುನ್ನ ಮುನೀರ್, ಕಾಶ್ಮೀರವು ಪಾಕ್‌ನ ರಕ್ತನಾಳ ಎಂದು ಹೇಳಿ ಉಗ್ರರನ್ನು ಪ್ರಚೋದಿಸಿದ್ದರು. ಇದೀಗ ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ಸ್ವಾತಂತ್ರ್ಯ ಹೋರಾಟವನ್ನು ಅಂತಾರಾಷ್ಟ್ರೀಯ ಕಾನೂನುಗಳೇ ಕಾನೂನುಬದ್ಧ ಎನ್ನುತ್ತವೆ. ಆದರೆ ಅದನ್ನೇ ಭಾರತವು ಭಯೋತ್ಪಾದನೆ ಎನ್ನುತ್ತದೆ’ ಎಂದರು.