
ಪಾಕಿಸ್ತಾನದ ವಾಯುನೆಲೆಗಳ ಮೇಲಿನ ಭಾರತದ ದಾಳಿಯನ್ನು ಇದುವರೆಗೂ ನಿರಾಕರಿಸುತ್ತಲೇ ಬಂದಿದ್ದ ಪಾಕ್ ಪ್ರಧಾನಿ ಪ್ರಧಾನಿ ಶೆಹಬಾಜ್ ಷರೀಫ್, ಇದೀಗ ಭಾರತೀಯ ಸೇನಾ ದಾಳಿಯನ್ನು ಒಪ್ಪಿಕೊಂಡಿದ್ದಾರೆ.
ಇಸ್ಲಾಮಾಬಾದ್ (ಮೇ.17): ಪಾಕಿಸ್ತಾನದ ವಾಯುನೆಲೆಗಳ ಮೇಲಿನ ಭಾರತದ ದಾಳಿಯನ್ನು ಇದುವರೆಗೂ ನಿರಾಕರಿಸುತ್ತಲೇ ಬಂದಿದ್ದ ಪಾಕ್ ಪ್ರಧಾನಿ ಪ್ರಧಾನಿ ಶೆಹಬಾಜ್ ಷರೀಫ್, ಇದೀಗ ಭಾರತೀಯ ಸೇನಾ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಮೇ 10ರಂದು ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ತಾಣಗಳನ್ನು ಹೊಡೆದುರುಳಿಸಿವೆ ಎಂದು ತಿಳಿಸಿದ್ದಾರೆ. ಮೇ 10ರಂದು ಬೆಳಗಿನ ಜಾವ 2:30ರ ಸುಮಾರಿಗೆ, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನನಗೆ ಕರೆ ಮಾಡಿ ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳನ್ನು ಹೊಡೆದಿರುಳಿಸಿದ್ದಾಗಿ ಮಾಹಿತಿ ನೀಡಿದರು. ಈ ಬೆನ್ನಲ್ಲೇ ದಾಳಿಯಾಗಿಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ತಾನದ ಅಸಲಿ ಮುಖವಾಡ ಬಯಲಾಗಿದೆ. ಇದೀಗ ರಾವಲ್ಪಿಂಡಿ ಏರ್‌ಬೇಸ್ ರಿಪೇರಿಗೆ ಟೆಂಡರ್ ಸಹ ಕರೆಯಲಾಗಿದೆಯಂತೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.