Jan 25, 2024, 4:57 PM IST
ಮೋದಿಯಿಂದ ಉದ್ಘಾಟನೆಗೊಳ್ಳಲಿದೆ ಮತ್ತೊಂದು ಮಂದಿರ.ಆದ್ರೆ, ಭಾರತದಲ್ಲಲ್ಲ.. ದೂರದ ಮುಸ್ಲಿಂ ದೇಶ ಒಂದರಲ್ಲಿ. ಅಲ್ಲಿ ತಲೆಎತ್ತಲಿದೆ ಪಶ್ಚಿಮ ಏಷ್ಯಾದ ಅತಿ ದೊಡ್ಡ ದೇಗುಲ. ಈಗ ಮೋದಿ (Narendra Modi)ಅವರಿಂದ ಉದ್ಘಾಟನೆಗೊಳ್ಳೊಕೆ ಮತ್ತೊಂದು ಮಂದಿರ ಸಜ್ಜಾಗಿ ನಿಂತಿದೆ. ಆದ್ರೆ ಅದಿರೋದು ಭಾರತದಲ್ಲಲ್ಲ(India). ಯುನೈಟೆಡ್ ಅರಬ್ ಎಮಿರೈಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ(Abu Dhabi). ಈ ಅಬುಧಾಬಿಯಿಂದ ಒಂದೈವತ್ತು ಕಿಲೋಮೀಟರ್ ಮುಂದೆ ಹೋದ್ರೆ, ಊರೆಲ್ಲಾ ಮಾಯವಾಗಿ ಮರುಭೂಮಿ ವೆಲ್ಕಮ್ ಮಾಡುತ್ತೆ. ಇದೇ ದಾರೀಲಿ ಮುಂದೆ ಸಾಗಿದ್ರೆ, ಅಲ್ಲೊಂದು ಬೃಹತ್ ನಿರ್ಮಾಣ ಕಾರ್ಯ ನಡೀತಿರೋದು ಕಣ್ಣಿಗೆ ಕಾಣುತ್ತೆ. ಅದೇನು ಅಂತ ಕುತೂಹಲದಿಂದ ಹೋಗಿ ನೋಡಿದ್ರೆ ಕಾಣೋದು. ಹಿಂದೂಗಳ ಮಂದಿರ. ಅಬುಧಾಬಿ ಅನ್ನೋದು ಮುಸ್ಲಿಂ ರಾಷ್ಟ್ರದಲ್ಲಿರೋ ಮಹಾನಗರ. ಅಲ್ಲಿರೋ ಬಹುಸಂಖ್ಯಾತರು ಮುಸ್ಲಿಮರು. ಆದ್ರೆ, ಅಲ್ಲೊಂದು ಹಿಂದೂ ಮಂದಿರ ನಿರ್ಮಾಣವಾಗ್ತಾ ಇದೆ. ದಿನಂಪ್ರತಿ ನೂರಾರು ಕಾರ್ಮಿಕರು, ಕುಶಲ ಕರ್ಮಿಗಳು ಅಲ್ಲಿನ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಕೆಲವು ದಿನಗಳ ಹಿಂದೆ, ಅಯೋಧ್ಯೆಲಿ ಹೇಗೆ ಕೆಲಸ ಬಿರುಸಾಗಿ ಸಾಗ್ತಾ ಇತ್ತೋ, ಅಂಥದ್ದೇ ವಾತಾವರಣ ಅಬುಧಾಬಿಯ ಈ ಮಂದಿರದ ಆವರಣದಲ್ಲೂ ಎದ್ದು ಕಾಣ್ತಾ ಇದೆ.
ಇದನ್ನೂ ವೀಕ್ಷಿಸಿ: I.N.D.I.A Alliance: ಬಿಹಾರದಲ್ಲಿ ನಿತೀಶ್ ಸಿಟ್ಟು.. ಪಂಜಾಬ್, ದೆಹಲಿಯಲ್ಲಿ ಕೇಜ್ರಿವಾಲ್ ಕ್ರೋಧ..!