Mohamed Muizzu: ಡ್ರ್ಯಾಗನ್ ಸಾಲದ ಶೂಲಕ್ಕೆ ಮಾಲ್ಡೀವ್ಸ್ ವಿಲವಿಲ! ಮಾಲ್ಡೀವ್ಸ್ ದ್ವೀಪ ದಹನ.. ಏನೇನು ಗೊತ್ತಾ ಕಾರಣ..?

Feb 18, 2024, 6:36 PM IST

ಮೋದಿ ಅವರು ಈ ಹಿಂದೆ ಲಕ್ಷದ್ವೀಪದಲ್ಲಿ ನಡೆಸಿದ್ದ ಫೋಟೋಶೂಟು-ಆ ಫೋಟೋಶೂಟಿಗೆ ಹೊಟ್ಟೆ ಉರಿದುಕೊಂಡು, ಬಂಬ್ಡಾ ಬಜಾಯಿಸಿದ ಮಾಲ್ಡೀವ್ಸ್ ಕತೆ ನಿಮಗೆ ಗೊತ್ತೇ ಇದೆ ಅಲ್ವಾ? ಆ ಕತೆಯ ಪ್ರಿ ಕ್ಲೈಮ್ಯಾಕ್ಸ್ ಈಗ ಶುರುವಾಗಿದೆ. ಅಹಂಕಾರದ ಮದದಲ್ಲಿ ಮೆರೀತಿದ್ದ ಮಾಲ್ಡೀವ್ಸ್(Maldives) ಮುಳುಗೋಕೆ ಶುರುಮಾಡಿದೆ. ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು(Mohamed Muizzu), ತನ್ನ ಜೀವಮಾನದ ಶ್ರೇಷ್ಠ ಸಾಧನೆ ಅಂತ ಯಾವುದನ್ನ ಭಾವಿಸಿದ್ನೋ ಅದನ್ನ ಸಾಧಿಸಿದ್ದ. ಅಧ್ಯಕ್ಷ ಗಾದಿ ಹತ್ತಿ ಕೂತಾಗಿನಿಂದ, ಭಾರತದ ಯೋಧರು ಮಾಲ್ಡೀವ್ಸ್ ಬಿಟ್ಟು ಹೋಗಿ ಅಂತ ಒಂದೇ ಕಣ್ಣಲ್ಲಿ ಅಳ್ತಾ ಇದ್ದ. ಕಡೆಗೂ ಮೊನ್ನೆ ಭಾರತದ(India) ಸೈನಿಕರು, ಮಾಲ್ಡೀವ್ಸ್ ನಿಂದ ಜಾಗ ಖಾಲಿ ಮಾಡೋ ಬಗ್ಗೆ ಸುಳಿವು ಸಿಕ್ಕಿದೆ. ಆದ್ರೆ, ಮಾಲ್ಡೀವ್ಸ್‌ನಿಂದ  ಭಾರತದ ಸೇನೆ(Indian Army)  ಹೊರಬರೋಕೂ ಮುನ್ನವೇ, ಆ ದ್ವೀಪ ರಾಷ್ಟ್ರದ ಸೌಭಾಗ್ಯವೇ ಆ ದೇಶನ ಬಿಟ್ಟು ಬಂದಿದೆ ಅನ್ನೋದು, ಈಗಿನ ಫ್ರೆಶ್ ನ್ಯೂಸ್. ಮಾಲ್ಡೀವ್ಸ್ ಖಜಾನೆಯಲ್ಲಿ ದುಡ್ಡಿಲ್ಲ. ಈ ಮಾತು ಹೇಳ್ತಾ ಇರೋದು ನಾವಲ್ಲ, ಮಾಲ್ಡೀವ್ಸ್ ವಿರೋಧಿಗಳೂ ಅಲ್ಲ. ಖುದ್ದು, ಮುಯಿಜು.. ಯಾವ ಮುಯಿಝು ಭಾರತದ ವಿರುದ್ಧ ಹರಿಹಾಯ್ತಾ ಇದ್ನೋ, ಅವನೇ ಹೇಳಿರೋ ಮಾತಿದು. ಕಳೆದ ಮಂಗಳವಾರ, ಮುಯಿಝು ಮಾಲ್ಡೀವ್ಸ್ನ ಅಭಿವೃದ್ಧಿ ಕಾರ್ಯಗಳನ್ನ ಕೈಗೊಳ್ಳೋಕೆ, ನಮ್ಮ ಹತ್ರ ಸಾಕಷ್ಟು ದುಡ್ಡಿಲ್ಲ ಅಂತ ಹೇಳಿಬಿಟ್ಟಿದ್ದ. ಅಷ್ಟೇ ಅಲ್ಲ, ಜನರ ಮುಂದೆ ಏನನ್ನೂ ಮುಚ್ಚಿಡೋಕೆ ನಮಗೆ ಇಷ್ಟವಿಲ್ಲ. ಹಾಗಾಗಿನೇ, ಇರೋದನ್ನ ಹೇಳ್ತಿದ್ದೀನಿ ಅಂತ ಮುಯಿಝು ಸ್ಟೇಟ್ಮೆಂಟ್ ಕೊಟ್ಟಿದ್ದ.. ಒಟ್ಟಾರೆ, ಮಾಲ್ಡೀವ್ಸ್ ಕೂಡ ದಿವಾಳಿಯ ಅಂಚಿಗೆ ಬಂದಿರೋದಂತೂ ಸತ್ಯ.

ಇದನ್ನೂ ವೀಕ್ಷಿಸಿ:  ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಶಾಕ್ ಮೇಲೆ ಶಾಕ್: ಬಿಜೆಪಿಯತ್ತ ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್ ?