ಜಗತ್ತನ್ನೇ ಇಬ್ಭಾಗ ಮಾಡಿಟ್ಟಿತಾ ಗಾಜಾ ಉಗ್ರರ ದಾಳಿ? ಯುದ್ಧದ ಹೊತ್ತಲ್ಲಿ ಇಸ್ರೇಲ್ ಪರ ನಿಂತಿದ್ಯಾರು..?

ಜಗತ್ತನ್ನೇ ಇಬ್ಭಾಗ ಮಾಡಿಟ್ಟಿತಾ ಗಾಜಾ ಉಗ್ರರ ದಾಳಿ? ಯುದ್ಧದ ಹೊತ್ತಲ್ಲಿ ಇಸ್ರೇಲ್ ಪರ ನಿಂತಿದ್ಯಾರು..?

Published : Oct 15, 2023, 09:46 AM IST

ಗಾಜಾ ಉಗ್ರರು ಶುರು ಮಾಡಿದ ಭೀಕರ ಯುದ್ಧ!
ಅದು ಯುದ್ಧವೇ ಅಲ್ಲ ಅಲ್ಲ.. ರಕ್ಕಸ ದಾಳಿ!
ಪ್ರತಿ ನಷ್ಟಕ್ಕೂ ಪ್ರತೀಕಾರ ತಗೋತಿದೆ ಇಸ್ರೇಲ್!
ಜಗತ್ತಿನ ಮೇಲೂ ಪರಿಣಾಮ ಬೀರಿದೆ ಉಗ್ರಕೃತ್ಯ!

ಇಸ್ರೇಲ್ ಈಗ ಹಮಾಸ್ ಉಗ್ರರ ಸಾಮ್ರಾಜ್ಯವನ್ನ ಸಂಪೂರ್ಣ ನಾಶ ಮಾಡೋಕೆ ಹೊರಟಿದೆ. ಗಾಜಾ(Gaza) ಪಟ್ಟಿ ಅರ್ಧಕ್ಕರ್ಧ ಸ್ಮಶಾನವಾದ ಹಾಗೆ ಕಾಣ್ತಾ ಇದೆ. ಆಸ್ಪತ್ರೆಗಳೆಲ್ಲಾ ಗಾಯಾಳುಗಳಿಂದ ತುಂಬಿ ತುಳುಕ್ತಾ ಇದೆ. ಗಾಜಾದಲ್ಲಿ ಇಂಥಾ ಭೀಭತ್ಸ ದಾಳಿ ಮಾಡಿರೋದು ಇಸ್ರೇಲ್(Isreal). ಗಾಜಾ ಉಗ್ರರು ಕೊಟ್ಟಿದ್ದ ಪಂಥಾಹ್ವಾನಕ್ಕೆ ಅತಿ ಭೀಕರವಾಗಿಯೇ ತಿರಗೇಟು ಕೊಡ್ತಾ ಇದೆ ಇಸ್ರೇಲ್. ಬರೋಬ್ಬರಿ ಮೂರು ಲಕ್ಷ ಇಸ್ರೇಲಿ ಸೈನಿಕರು ಉಗ್ರ ಸಾಮ್ರಾಜ್ಯದ ಮೇಲೆ ಮುಗಿಬಿದ್ದಿದ್ದಾರೆ. ಗಾಜಾ ನಿವಾಸಿಗಳಿಗೆ 24 ಗಂಟೆಗಳ ಕಾಲ ಗಡುವು ಕೊಟ್ಟ ಇಸ್ರೇಲ್, ಈ ಕ್ಷಣವೇ ಗಾಜಾದ  ದಕ್ಷಿಣ ಭಾಗಕ್ಕೆ ಹೋಗಿಬಿಡಿ. ಇಲ್ಲದಿದ್ರೆ ಉಗ್ರರ ಜೊತೆ ನೀವೂ ಸಾಯ್ತೀರಿ ಅಂತ ಹೇಳಿದೆ. ಅಲ್ಲಿಗೆ, ಗಾಜಾದ ಉತ್ತರ ಭಾಗವನ್ನ ಇಸ್ರೇಲ್ ತತ್ತರಿಸೊ ಹಾಗೆ ಮಾಡೋದ್ರಲ್ಲಿ ನೋ ಡೌಟ್. ಇಸ್ರೇಲ್ ಅಂತೂ ಈ ಯುದ್ಧವೇ(War) ತನ್ನ ಫೈನಲ್ ಬ್ಯಾಟಲ್ ಅನ್ನೋ ಹಾಗೆ ಬಿಹೇವ್ ಮಾಡ್ತಾ ಇದೆ. ಹಮಾಸ್ ಅನ್ನೋ ಉಗ್ರ ಸಂಘಟನೆಯ ಒಬ್ಬನೇ ಒಬ್ಬ ಸದಸ್ಯನನ್ನೂ ಉಳಿಸಲ್ಲ ಅಂತ ಇಸ್ರೇಲ್ ಹೇಳಿಕೊಂಡಿದೆ. ಅಲ್ಲ, ತನ್ನ ದೇಶದ ಮೇಲೆ ದಾಳಿಮಾಡಿದವರ ಪ್ರಾಣ ತೆಗೆಯೋಗೆ ಜಗತ್ತಿನ ಮೂಲೆಮೂಲೆಯಿಂದಲೂ ಜನ ಧಾವಿಸಿ ಬರ್ತಾ ಇದಾರೆ.. ಕ್ಷಣಕ್ಷಣಕ್ಕೂ ಇಸ್ರೇಲ್ ಸೇನೆಯ ಬಾಹುಬಲ ದುಪ್ಪಟ್ಟಾಗ್ತಾ ಇದೆ. ಇಸ್ರೇಲಿಗರಿಗೆ ಎಲ್ಲಕ್ಕಿಂತಾ ದೇಶವೇ ಮೊದಲು.. ದೇಶಕ್ಕೆ ಆಪತ್ತು ಎದುರಾದ್ರೆ, ಅದು ತನ್ನ ಮೇಲೇ ಆಗ್ತಾ ಇರೋ ದಾಳಿ  ಅಂತ ಭಾವಿಸ್ತಾರೆ.. ಹಾಗಾಗಿನೇ, ಜಗತ್ತಿನ ಯಾವ ಮೂಲೇಲೇ ಇದ್ರೂ, ಇಂಥಾ ಸಂದರ್ಭದಲ್ಲಿ ಧಾವಿಸಿ ಬರ್ತಾರೆ.. ಈಗಲೂ ಅಷ್ಟೇ, ಬರೋಬ್ಬರಿ ಮೂರು ಲಕ್ಷದ 60 ಸಾವಿರ ಮಂದಿ ಯುವಕರು, ಇಸ್ರೇಲ್ ಸೇನೆ ಸೇರೋಕೆ ಬರ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಇಸ್ರೇಲ್ ಜೊತೆಯಲ್ಲಿ ಹಮಾಸ್ ಆಡ್ತಿರೋ ಆಟವೆಂಥದ್ದು..? ಭೂಸೇನೆಯನ್ನ ನುಗ್ಗಿಸೋಕೆ ಯಾಕೆ ಹಿಂದೇಟು..!

48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
Read more