ಕೈ ಜಾರುತ್ತಿದೆಯಾ ಬಲೂಚ್? ಪಾಕ್ ಸಚಿವರೇ ಒಪ್ಪಿಕೊಂಡ ಸತ್ಯ: ಪಾಕ್ ಸೇನೆಗಿಂತಾ ಬಂಡುಕೋರರೇ ಹೈ-ಟೆಕ್!

ಕೈ ಜಾರುತ್ತಿದೆಯಾ ಬಲೂಚ್? ಪಾಕ್ ಸಚಿವರೇ ಒಪ್ಪಿಕೊಂಡ ಸತ್ಯ: ಪಾಕ್ ಸೇನೆಗಿಂತಾ ಬಂಡುಕೋರರೇ ಹೈ-ಟೆಕ್!

Published : Feb 06, 2026, 11:02 PM IST
ಬಲೂಚ್ ಬಂಡುಕೋರರು ಅಮೆರಿಕಾದ ಅತ್ಯಾಧುನಿಕ ಆಯುಧಗಳನ್ನು ಪಡೆದುಕೊಂಡಿದ್ದು, ಪಾಕಿಸ್ತಾನಿ ಸೇನೆಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವರೇ ಈ ಸತ್ಯವನ್ನು ಒಪ್ಪಿಕೊಂಡಿದ್ದು, ಈ ಹೈ-ಟೆಕ್ ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

ಒಂದು ಕಡೆ ಜಗತ್ತಿನ ಪ್ರಬಲ ರಾಷ್ಟ್ರದ ಅತ್ಯಾಧುನಿಕ ಯುದ್ಧ ಸಾಮಗ್ರಿಗಳು.. ಇನ್ನೊಂದು ಕಡೆ ಅದೇ ಆಯುಧಗಳನ್ನ ಹಿಡಿದು ಬೆಟ್ಟದ ಸಾಲುಗಳಲ್ಲಿ ಮರೆಯಾಗೋ ಅಗೋಚರ ಹೋರಾಟಗಾರರು.. ಪಾಕಿಸ್ತಾನದ ರಕ್ಷಣಾ ಸಚಿವರೇ ಲೋಕಸಭೆಯಲ್ಲಿ ದಿಕ್ಕೇ ತೋಚದೆ ತಲೆ ತಗ್ಗಿಸಿ ನಿಲ್ಲೋ ಹಾಗೆ ಮಾಡಿದೆ ಆ ಹೈ-ಟೆಕ್ ಸೀಕ್ರೆಟ್..  ಪಾಪಿದೇಶದ ಬಜೆಟ್‌ಗಿಂತಲೂ ದುಬಾರಿ ರೈಫಲ್‌ಗಳು ಬಲೂಚ್ ಬಂಡಾಯಗಾರರ ಕೈ ಸೇರಿದೆ.. ಅದು ಸಾಧ್ಯವಾಗಿದ್ದು ಹೇಗೆ? ಸುಸಜ್ಜಿತ ಸೇನೆಯೇ ಬೆಚ್ಚಿ ಬೀಳೋ ಹಾಗ್ ಮಾಡಿದ ಆ ರಣತಂತ್ರ ಕತೆ ಏನು?  ಸೈನ್ಯದ ದರ್ಪಕ್ಕೆ ಸೆಡ್ಡು ಹೊಡೆದು ನಿಂತಿರೋ ಈ ದಂಗೆಕೋರರ ಬೆನ್ನಿಗೆ ಯಾರಿದ್ದಾರೆ? ಬಲೂಚಿಸ್ತಾನದ ಕಲ್ಲುಬಂಡೆಗಳ ನಡುವೆ ಅಡಗಿರೋ ಆ ಸ್ಫೋಟಕ ಸತ್ಯಗಳನ್ನ ಬಿಚ್ಚಿಡುವ ಪ್ರಯತ್ನ ಇಲ್ಲಿದೆ ನೋಡಿ..

ಬಲೂಚಿಗರ ಬಂಡಾಯದ ಬೆಂಕಿ, ಪಾಕ್ ಬುಡವನ್ನೇ ಸುಡ್ತಾ ಇದೆ.. ಒಂದೊಂದೇ ಪ್ರಾಂತ್ಯಗಳು ಕೈಜಾರ್ತಾ ಇದಾವೇನೋ ಅನ್ನೋ ಭಯ, ಪಾಕಿಸ್ತಾನಾನ ಕಾಡ್ತಾ ಇದೆ.. ಈ ಭಯ ಹೋಗ್ಬೇಕು ಅಂದ್ರೆ, ಪಾಕಿಸ್ತಾನಕ್ಕಿರೋದು ಒಂದೇ ದಾರಿ. ಪಾಕಿಸ್ತಾನವನ್ನ ಈಗ ಬಲೂಚಿನ ಬೆಂಕಿ ಸುಡ್ತಾ ಇದೆ.. ಅದರ ದಹನ ಕಾರ್ಯ, ಇಡೀ ಜಗತ್ತಿನ ಕಣ್ಣಿಗೇ ಕಾಣ್ತಾ ಇದೆ.. ಛಿದ್ರವಾಗೋಕೆ ತುದಿಗಾಲಲ್ಲಿ ನಿಂತು ಕಾಯ್ತಾ ಇರೋ ಪಾಪಿ ಪಾಕ್ ಪರಿಸ್ಥಿತಿ, ಈಗ ಏನಾಗಿದೆ ಗೊತ್ತಾ? ಇದನ್ನೆಲ್ಲಾ ನೋಡಿನೂ, ಪಾಕಿಸ್ತಾನ ತೆಪ್ಪಗಿರೋದ್ಯಾಕೆ? ಏನೂ ಮಾಡೋಕ್ಕಾಗದ ಹಂತಕ್ಕೆ ಪಾಕ್ ಜಾರಿ ಬಿದ್ದಿದ್ಯಾಕೆ?  ಬಲೂಚಿಸ್ತಾನದಲ್ಲಿ ಈಗ ನಡೀತಿರೋದು ಗುಂಡಿನ ಚಕಮಕಿ ಅಲ್ಲ.. ಪಾಕಿಸ್ತಾನದ ಸೈನ್ಯದ ಅಸಲಿ ಬಣ್ಣ ಬಯಲು ಮಾಡ್ತಿರೋ ದೊಡ್ಡ ಸತ್ಯ..  ಅಮೆರಿಕಾದ ಅಸ್ತ್ರಗಳೇ ಬಲೂಚಿಗಳಿಗೆ ಧೈರ್ಯ.. ಆದ್ರೆ ಪಾಕ್ ಪಾಲಿಗೆ ಉಳಿದಿರೋದೇನು?
ಈ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more