ದೇಶದ ಸೇನಾ ಶಕ್ತಿ ಹೆಚ್ಚಿಸುವುದೇ ಈ ಒಪ್ಪಂದ ?: ಅದೆಷ್ಟು ಶಕ್ತಿಶಾಲಿ GE-F414 ಫೈಟರ್ ಜೆಟ್.. MQ-9B ಡ್ರೋನ್‌..?

Jun 23, 2023, 12:44 PM IST

ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿಯಾಗಿ 9 ವರ್ಷಗಳಲ್ಲಿ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಅಮೆರಿಕಾಗೂ ಭೇಟಿ ನೀಡಿದ್ದಾರೆ. ಆದ್ರೆ, ಇಂದಿನ ಈ ಭೇಟಿ ಜಗತ್ತಿನಾದ್ಯಂತ ಸುದ್ದಿಯಾದಷ್ಟು ಇನ್ಯಾವ ಭೇಟಿಗಳು ಸುದ್ದಿಯಾಗಲಿಲ್ಲ.ನರೇಂದ್ರ ಮೋದಿ ಮತ್ತು ಭೈಡನ್ ಅವ್ರ ಈ ಭೇಟಿ ಇಷ್ಟೊಂದು ಸುದ್ದಿಯಾಗುತ್ತಿರುವುದೇಕಂದ್ರೆ, ಪ್ರಧಾನಿ ಮೋದಿಯವರ ಅಮೆರಿಕಾ ಪ್ರವಾಸದ ಮೇಲೆ ಅಮೆರಿಕಾದ ಶತ್ರುಗಳು ಮತ್ತು ಭಾರತದ ವೈರಿಗಳು ಇಬ್ಬರೂ ಕಣ್ಣಿಟ್ಟಿದ್ದಾರೆ. ಹೀಗಾಗಿ ಈ ಪ್ರವಾಸ ಇಷ್ಟೊಂದು ಸುದ್ದಿಯಾಗುತ್ತಿದೆ. ಬೈಡನ್ ಮತ್ತು ಮೋದಿ ಭೇಟಿ ತಮಗೆಷ್ಟು ಅಪಾಯಕಾರಿ ಅನ್ನೋದು ಅವ್ರಿಗೆಲ್ಲ ಗೊತ್ತಿತ್ತು. ಹೀಗಾಗಿ ಎರಡೂ ದೇಶದ ಶತ್ರುಗಳು ಈ ಪ್ರವಾಸದ ಮೇಲೆ ಕಣ್ಣಿಟ್ಟಿದ್ದಾರೆ.ಇಲ್ಲಿ ಶತ್ರುಗಳು ಊಹಿಸಿದಂತೆ ನಿಜ ಕೂಡ ಆಗಿದೆ. ನಿನ್ನೆ ಅಮೆರಿಕಾ ಮತ್ತು ಭಾರತದ ಮಧ್ಯೆ ಮಹತ್ವದ ರಕ್ಷಣಾ ಒಪ್ಪಂದವಾಗಿದೆ.ಈ ರಕ್ಷಣಾ ಒಪ್ಪಂದದಿಂದ ಎರಡೂ ದೇಶಗಳ ಶತ್ರುಗಳಿಗೆ ಈಗಲೇ ನಡುಕ ಹುಟ್ಟಿಕೊಂಡಿದೆ.

ಇದನ್ನೂ ವೀಕ್ಷಿಸಿ:  ಜುಲೈಗಿಲ್ಲ ಅನ್ನಭಾಗ್ಯ, ಪ್ಲಾನ್ "ಸಿ" ವರ್ಕ್ ಆಗುತ್ತಾ?: ಅಕ್ಕಿವ್ಯೂಹ ಭೇದಿಸ್ತಾರಾ ಸಿಎಂ ಸಿದ್ದು ?