Jan 12, 2025, 12:18 PM IST
ಬೆಂಗಳೂರು(ಜ.12): ಶರವೇಗದಲ್ಲಿ ನುಗ್ಗಿದ ಕಾರು.. ಮಗು ಜಸ್ಟ್ ಬಚಾವ್.. ಪೋಷಕರೇ ಎಚ್ಚರ..ಎಚ್ಚರ. ಪ್ರಾಣಿಗಳನ್ನ ಮುದ್ದಾಡೋಕೆ ಮಕ್ಕಳನ್ನ ಬಿಡುವ ಮುನ್ನ ಹುಷಾರ್.. ರಸ್ತೆ ಮಧ್ಯದಲ್ಲಿ ಆರಾಮಾಗಿ ಕೂತಿದ್ದವರಿಗೆ ಗುದ್ದಿ ಹೋದ ಕಾರು.. ಕೋತಿಯಂತೆ ಜಿಗಿದು ಮರದ ಕೊಂಬೆ ಹಿಡಿಯಲು ಹೋದವನು ಮೈ ಮೂಳೆ ಮುರಿದುಕೊಂಡ.. ಸಿಡಿದ ಸಿಲಿಂಡರ್, ಮೈಗೆ ಹೊತ್ತಿಕೊಳ್ತು ಬೆಂಕಿ..ದುಬಾರಿ ಕಾರುಗಳನ್ನ ಪ್ರಪಾತಕ್ಕೆ ಕೆಡವಿ ಇದೆಂತಹಾ ಹುಚ್ಚಾಟ.. ಮೈ ಝಂ ಎನ್ನಿಸುವಂತಹ, ಎದೆ ಝಲ್ ಎನ್ನಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ. ಸೂಪರ್ ಡೆಡ್ಲಿ ಡೇಂಜರ್.
ಇಲ್ಲೊಬ್ಬ ಹುಚ್ಚನಿಂದ ಕಾರಿನ ಗಾಜು ಪುಡಿಪುಡಿಯಾಗಿದೆ. ಡ್ರೈವರ್ ರೊಚ್ಚಿಗೆದ್ದಿದ್ದಾನೆ. ಸಿಡಿದ ಗ್ಯಾಸ್ ಸಿಲೆಂಡರ್..ಸಮಯ ಪ್ರಜ್ಞೆಯಿಂದ ತಪ್ಪಿತು ಮಹಾ ದುರಂತ. ಇಲ್ಲೊಂದು ಗೇಮ್ ಇದೆ. ಅದನ್ನ ನೋಡೋಕೆ ಬಹಳ ಈಜಿ ಅನ್ನಿಸುತ್ತೆ. ಆದ್ರೆ, ಆಡೋರಿಗೆ ಮಾತ್ರ ಅದ್ರ ಅಸಲಿಯತ್ತು ಗೊತ್ತು. ಚಿರತೆ ದಾಳಿಗೆ ಸಿಲುಕಿಕೊಂಡಿದ್ದ ನಾಯಿ ಚಾಲಾಕಿತನದಿಂದ ಬಚಾವ್ ಆಗಿದ್ದೇ ರಣರೋಚಕ..ಇನ್ನೊಂದು ಕಡೆ ಮೊಸಳೆಯ ಬಾಯಿಗೆ ಸುಲಭದ ತುತ್ತಾಗಿದೆ ಚಿರತೆ.. ಇನ್ಯಾಕೆ ತಡ ಮಾಡೋದು, ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.
Deadly Danger: ಪಾನಿಪುರಿ ಅಂಗಡಿಗೆ ನುಗ್ಗಿದ ಕಾರು! ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದವರು ಜಸ್ಟ್ ಮಿಸ್!
ಮನುಷ್ಯನನ್ನೇ ಮೂರ್ಖನನ್ನಾಗಿ ಮಾಡಿ, ಆತನನ್ನೇ ಬೇಟೆಯಾಡೋಕೆ ಮೊಸಳೆಯೊಂದು ಮಹಾ ಮಸಲತ್ತು ಮಾಡಿರೊ ವಿಡಿಯೋ ಸದ್ಯ ಭಾರೀ ವೈರಲ್ ಆಗ್ತಿದೆ. ಹಾಗಿದ್ರೆ ಆ ವಿಡಿಯೋ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡೋಣ.
ಮನುಷ್ಯರನ್ನ ಬೇಟೆಯಾಡೋಕೆ ಮೊಸಳೆಯೊಂದು ಮಾಡಿದೆ ಮಹಾ ಮಸಲತ್ತು.. ಕಂಟ್ರೋಲ್ ತಪ್ಪಿ ಹೋಟೆಲ್ ಒಳಗೆ ನುಗ್ಗಿದೆ ಟಿಪ್ಪರ್ ಲಾರಿ.. ಸಾವು ಬಹಳ ಕ್ರೂರಿ, ಎಂಟು ವರ್ಷದ ಬಾಲಕಿಯನ್ನೂ ಬಿಟ್ಟಿಲ್ಲ. ಸಾವಿನ ಹತ್ತಿರಕ್ಕೆ ಹೋದವನನ್ನ ಕಾಪಾಡಿದ್ದು ಹೇಗೆ ಜೊತೆಗಾರರು..? ಇಲ್ಲಿವೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳು.
ಕಾಡಿಂದ ನಾಡಿಗೆ ನುಗ್ಗಿದ ಆನೆಯೊಂದು ಗಣೇಶನ ಮೂರ್ತಿ ಎದುರು ಶರಣಾಗಿದೆ. ಕಾಡಾನೆ ಭಕ್ತಿ ಕಂಡು ಜನ ಆಶ್ಚರ್ಯಚಕಿತರಾಗಿದ್ದಾರೆ. ಹಾಗಿದ್ರೆ ಆ ವಿಡಿಯೋದಲ್ಲಿ ಅಂತದ್ದೇನಿದೆ ಅಂತ ನೋಡೋಣ.
ಗಣೇಶನ ಮೂರ್ತಿಗೆ ನಮಿಸಿ ಹೋದ ಗಜರಾಜ. ರಸ್ತೆ ಮಧ್ಯೆ ಕಿರಿಕ್. ಬೈಕ್ ಸವಾರರ ಮೇಲೆ ಕಾರು ಹತ್ತಿಸಿಯೇ ಬಿಟ್ಟ ಕ್ರೂರಿ..ಕರುಣೆಯಿಲ್ಲದೇ ಧಗಧಗಿಸ್ತಿದೆ ಕಾಡ್ಗಿಚ್ಚು. ಒಂದೊಂದು ದೃಶ್ಯವೂ ನರಕದಂತೆ ಕಾಣಿಸ್ತಿದೆ.