vuukle one pixel image

ಕ್ರಿಶ್ಚಿಯನ್ನರ ಮೇಲೇಕೆ ಪಾಕ್‌ನಲ್ಲಿ ಆಕ್ರೋಶ..? ಹೇಗಿದೆ ಗೊತ್ತಾ ಪಾಕ್‌ನಲ್ಲಿ ಮೈನಾರಿಟಿ ಪರಿಸ್ಥಿತಿ..?

Bindushree N  | Published: Aug 18, 2023, 2:41 PM IST

ಇಷ್ಟೂ ಕಾಲ ಪಾಕಿಸ್ತಾನ ಅನ್ನೋ ಭೂಲೋಕ ನರಕ, ಕೇವಲ ಹಿಂದೂಗಳಷ್ಟೇ ಹಿಂಸೆ ಕೊಡ್ತಾ ಇದೆ ಅನ್ನೋ ಭಾವನೆ ಇತ್ತು. ಆದ್ರೆ ಈಗ ಆ ನರಕದಲ್ಲಿ ಕ್ರಿಶ್ಚಿಯನ್ನರಿಗೂ ಭಯ ಶುರುವಾಗಿದೆ. ವಿನಾಕಾರಣ ಪಾಕಿಸ್ತಾನದಲ್ಲಿ  ಚರ್ಚ್‌ಗಳು ಹೊತ್ತಿ ಉರೀತಿದ್ದಾವೆ. ಇದರ ಹಿಂದೆ, ಬೇರೆಯದೇ  ಹುನ್ನಾರ ಅನ್ನೋ ಮಾತಿದೆ. ಪಾಕಿಸ್ತಾನವನ್ನ ದೇಶ ಅಂತ ಕರೆಯೋದಕ್ಕಿಂತಾ, ದ್ವೇಷದ ನರಕ ಅಂತ ಕರೆಯೋದೇ ಹೆಚ್ಚು ಸೂಕ್ತ. ಪಾಕಿಸ್ತಾನ ಈಗ ಎಂಥಾ ಘೋರಾತಿಘೋರ ಸ್ಥಿತಿಯಲ್ಲಿದೆ ಅಂತ.. ತುತ್ತು ಅನ್ನಕ್ಕೂ ಆಹಾಕಾರ.. ಖಜಾನೇಲಿ ದುಡ್ಡಿಲ್ಲ.. ಅಸಲಿಗೆ ಸದೃಢವಾದ ಸರ್ಕಾರವೇ ಇಲ್ಲದ ಪಾಕಿಸ್ತಾನ, ಇವತ್ತು ಅಲ್ಲಿರೋ ಕ್ರಿಶ್ಚಿಯನ್ನರಿಗೆ ನರಕ ದರ್ಶನ ಮಾಡಿಸ್ತಾ ಇದೆ. ಸಾಮಾನ್ಯವಾಗಿ ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಕಿರುಕುಳ ಕೊಡ್ತಾರೆ ಅನ್ನೋದು ಗೊತ್ತಿದೆ. ಕಳೆದ ಕೆಲವು ತಿಂಗಳಲ್ಲಿ ಅನೇಕ ದೇವಾಲಯಗಳನ್ನ ಧ್ವಂಸ ಮಾಡಿರೋದು ನೋಡಿದ್ರೆ, ಆ ವಿಚಾರ ಸ್ಪಷ್ಟವಾಗಿ ಗೊತ್ತಾಗುತ್ತೆ. ಆದ್ರೆ, ಪಾಕಿಗಳ ಕೋಪ ಆಕ್ರೋಶ ದ್ವೇಷ, ಹೀಗೆ ಕ್ರಿಶ್ಚಿಯನ್ನರ ವಿರುದ್ಧವೂ ಇದೆ ಅನ್ನೋ ಸಂಗತಿ, ಅಮೆರಿಕಾ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಶಾಕ್ ಕೊಟ್ಟಿದೆ.

ಇದನ್ನೂ ವೀಕ್ಷಿಸಿ:  ಇದು ಮಾಜಿ ಸಿಎಂ ಸ್ವಕ್ಷೇತ್ರದ ಕಥೆ: ನಾಯಕರೇ ವೋಟು ಕೇಳ್ತೀರಾ..ಕೆಲಸ ಮಾಡಲ್ವಾ ?