Oct 20, 2023, 9:23 AM IST
ಸೌದಿ ಅರೇಬಿಯಾದ ಜೆಡ್ಡಾದಲ್ಲಿ 57 ಇಸ್ಲಾಂ ರಾಷ್ಟ್ರಗಳ ಒಐಸಿ ಒಕ್ಕೂಟದ ಸಭೆ ನಡೆಸಿದೆ. ಇರಾನ್, ಪಾಕಿಸ್ತಾನ, ಈಜಿಪ್ಟ್, ಜೋರ್ಡಾನ್ ಸೇರಿ 57 ರಾಷ್ಟ್ರಗಳು ಒಂದಾಗಿದ್ದು, ಈ ಕೂಡಲೇ ಇಸ್ರೇಲ್ ಯುದ್ಧ ಭೂಮಿಯಿಂದ ಹೊರ ನಡೆಯಬೇಕೆಂದು ಒಮ್ಮತದ ನಿರ್ಧಾರ ಕೈಗೊಂಡಿವೆ. ಒಂದು ವೇಳೆ ಇಸ್ರೇಲ್ ಗಾಜಾದಿಂದ(Gaza) ಹಿಂದೆ ಸರಿಯದಿದ್ರೆ 57 ರಾಷ್ಟ್ರಗಳು ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ವ್ಯವಹಾರಕ್ಕೆ ಬ್ರೇಕ್ ಹಾಕಿ, ತೈಲದಿಂದ ಹಿಡಿದು ಎಲ್ಲಾ ವ್ಯವಹಾರ ಸ್ಥಗಿತಗೊಳಿಸುವ ಬೆದರಿಕೆ ಹಾಕಿವೆ. ಇಸ್ರೇಲ್‌ಗೆ ಬಂದಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್(Joe Biden), ಬೆಂಜಮಿನ್ ನೆತನ್ಯಾಹೋ (Benjamin Netanyahu) ಜತೆ ಮಾತುಕತೆ ಬಳಿಕ ಜೊರ್ಡಾನ್‌ಗೆ ಹೋಗಬೇಕಿತ್ತು. ಆದ್ರೆ ಇದೇ ಆಸ್ಪತ್ರೆ ದಾಳಿ ಮುಂದಿಟ್ಟುಕೊಂಡು ಮುಸ್ಲಿಂ ರಾಷ್ಟ್ರಗಳು ಆ ಸಭೆಯನ್ನ ರದ್ದುಗೊಳಿಸಿದ್ದವು. ಅಮೆರಿಕಕ್ಕೆ ನಿರ್ಗಮನದ ಬಳಿಕ ಜೋ ಬೈಡೆನ್, ಗಾಜಾ ನಿರಾಶ್ರಿತರ ಪರವಾಗಿ ಅನುಕಂಪ ತೋರಿಸಿದ್ದು, 100 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ. ಒಂದೆಡೆ ಇಸ್ಲಾಂ ರಾಷ್ಟ್ರಗಳು ಇಸ್ರೇಲ್(Isreal) ಮೇಲೆ ಬೆದರಿಕೆ ಹಾಕ್ತಿದ್ರೆ, ಇನ್ನೊಂದು ಕಡೆ ಅಮೆರಿಕ ನಿಮ್ಮ ಜೊತೆಗೆ ಇದ್ದೇವೆ ಅಂತ ಹೇಳುತ್ತಲೇ ಇಸ್ರೇಲ್ ಗಾಜಾ ನಿರಾಶ್ರಿತರ ನೆರವಿಗೆ ನಿಲ್ಲಬೇಕು ಎಂದಿದೆ. ಜತೆಗೆ ಈಜಿಪ್ಟ್ ಗಡಿ ತೆರೆದು ನಿರಾಶ್ರಿತರು ವಲಸೆ ಹೋಗಲು ಸಹಕರಿಸಬೇಕು ಎಂದು ಹೇಳ್ತಿದೆ. ಆದರೆ ಇಸ್ರೇಲ್ ಮಾತ್ರ ಇಟ್ಟ ಹೆಜ್ಜೆ ಹಿಂದೆ ಸರಿಯೋ ಮಾತೇ ಇಲ್ಲ. ಹಮಾಸ್ ಉಗ್ರರನ್ನ ಸೆದೆ ಬಡೆಯುವವರಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಕಡ್ಡಿ ಮುರಿದಂತೆ ಹೇಳಿದೆ.
ಇದನ್ನೂ ವೀಕ್ಷಿಸಿ: News Hour: ಇಸ್ರೇಲ್ ವಿರುದ್ಧ ಒಂದಾದ 57 ಮುಸ್ಲಿಂ ರಾಷ್ಟ್ರಗಳು