ನಯಾ ಪಾಕಿಸ್ತಾನ.. ನಯಾ ಪಾಕಿಸ್ತಾನ.. ಇದು ಇಮ್ರಾನ್ ಖಾನ್ ಅನ್ನೋ ಮಾಜಿ ಕ್ರಿಕೆಟಿಗ, ಇಡೀ ಪಾಕಿಸ್ತಾನಕ್ಕೆ ಕೊಟ್ಟಿದ್ದ ಅದ್ಭುತ ಕನಸು.. ಆದ್ರೆ, ಈ ಘೋಷಣೆ ಕೂಗಿದ 10 ವರ್ಷಗಳಲ್ಲಿ ಆಗಿದ್ದೇನು..? ಪಾಕಿಸ್ತಾನ ಇವತ್ತು ನಯಾ ಪೈಸೆಗೂ ಪರದಾಡೋ ಹಾಗಾಗಿದೆ.. ವಿದೇಶಗಳ ಮುಂದೆ ಭಿಕ್ಷೆ ಬೇಡೋ ಸ್ಥಿತಿಗೆ ಬಂದಿದೆ.
ಇಸ್ಲಮಾಬಾದ್(ಮಾ.28) ನಯಾ ಪಾಕಿಸ್ತಾನ.. ನಯಾ ಪಾಕಿಸ್ತಾನ.. ಇದು ಇಮ್ರಾನ್ ಖಾನ್ ಅನ್ನೋ ಮಾಜಿ ಕ್ರಿಕೆಟಿಗ, ಇಡೀ ಪಾಕಿಸ್ತಾನಕ್ಕೆ ಕೊಟ್ಟಿದ್ದ ಅದ್ಭುತ ಕನಸು.. ಆದ್ರೆ, ಈ ಘೋಷಣೆ ಕೂಗಿದ 10 ವರ್ಷಗಳಲ್ಲಿ ಆಗಿದ್ದೇನು..? ಪಾಕಿಸ್ತಾನ ಇವತ್ತು ನಯಾ ಪೈಸೆಗೂ ಪರದಾಡೋ ಹಾಗಾಗಿದೆ.. ವಿದೇಶಗಳ ಮುಂದೆ ಭಿಕ್ಷೆ ಬೇಡೋ ಸ್ಥಿತಿಗೆ ಬಂದಿದೆ.
ಇವತ್ತು ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಅದಕ್ಕಿಂತಾ ಮುಖ್ಯವಾಗಿ ರಾಜ್ಯಕೀಯ ಸ್ಥಿತಿಗತಿ ಮೊದಲೇ ನೆಟ್ಟಗಿಲ್ಲ.. ಯಾವಾಗ ಬೇಕಿದ್ರೂ ಪಾಕಿಸ್ತಾನದೊಳಗೆ ಅಂತರ್ಯುದ್ಧ ಶುರುವಾಗ್ಬೋದು ಅನ್ನೋ ಮಾತು ಅದಾಗಲೇ ಕೇಳಿಬರ್ತಾ ಇದೆ. ಹತ್ತು ವರ್ಷಗಳ ಹಿಂದೆ, ಯಾವ ಇಮ್ರಾನ್ ಖಾನ್, ಪಾಕಿಸ್ತಾನದ ಹಣೆಬರಹವನ್ನು ಬದಲಾಯಿಸ್ತೀನಿ ಎಂದು ಹೇಳಿದ್ದರೋ, ಅದೇ ಇಮ್ರಾನ್ ಖಾನ್ ಪಾಕಿಸ್ತಾನದ ಆಡಳಿತ ಸರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಹಿರಂಗ ಹೇಳಿಕೆ ನಿಡುತ್ತಿದ್ದಾರೆ.