ಬಡವರ ಪಾಲಿಗೆ ಅನ್ನದಾತೆಯಾದ ಮೀನು ಹೆಕ್ಕುವ ಶಾರದಕ್ಕ..!

Apr 23, 2020, 2:05 PM IST

ಉಡುಪಿ(ಏ.23): ಬಡವರ ಕಷ್ಟ ಮತ್ತೊಬ್ಬ ಬಡವನಿಗೆ ಮಾತ್ರ ಅರ್ಥವಾಗುತ್ತೆ ಎನ್ನುವ ಮಾತೊಂದಿದೆ. ಕೊರೋನಾ ವೈರಸ್‌ನಿಂದಾಗಿ ಭಾರತ ಲಾಕ್‌ಡೌನ್ ಆಗಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಉಡುಪಿಯ ಮೀನು ಹೆಕ್ಕುವ ಶಾರದಕ್ಕ ಬಡವರ ಪಾಲಿಗೆ ಅಕ್ಷರಶಃ ಅನ್ನಪೂರ್ಣೆಯಾಗಿದ್ದಾರೆ.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸುಮಾರು 140ಕ್ಕೂ ಅಧಿಕ ಕುಟುಂಬಗಳಿಗೆ ಉಡುಪಿಯ ಬಾಪು ತೋಟದ ನಿವಾಸಿ ಶಾರದಕ್ಕ ಅನ್ನದಾತೆಯಾಗಿದ್ದಾರೆ. ಮಲ್ಪೆ ಬಂದರಿನಲ್ಲಿ ಮೀನು ಹೆಕ್ಕಿ ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಶಾರದಕ್ಕ ಹಲವರ ಪಾಲಿಗೆ ಮಾದರಿಯಾಗಿದ್ದಾರೆ.

ನೀವು ಕೊರೋನಾ ವೈರಸ್‌ನಿಂದ ಸೇಫ್ ಆಗಿರಬೇಕಿದ್ದರೆ ಈ ರಸ್ತೆಗಳಲ್ಲಿ ಓಡಾಡ್ಬೇಡಿ..!

ಮಳೆಗಾಲಕ್ಕೂ ಮುನ್ನ ತಮ್ಮ ಮನೆ ರಿಪೇರಿಗಾಗಿ ಉಳಿಸಿದ್ದ ಸುಮಾರು 30 ಸಾವಿರ ರುಪಾಯಿ ಹಣದಲ್ಲಿ ಅಕ್ಕಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ನೆರವು ನೀಡಿದ್ದಾರೆ. ಕಷ್ಟದಲ್ಲಿರುವವರಿಗೆ ಯಾರು ನೆರವಾಗಿಲ್ಲ. ಹೀಗಾಗಿ ನಾನು ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎನ್ನುತ್ತಾರೆ ಶಾರದಕ್ಕ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.