ಬಂಗುಡೆ ಬೇಕಾ, ಮಾಂಜಿ ಬೇಕಾ.? ಕರಾವಳಿ ತುಂಬೆಲ್ಲಾ ತಾಜಾ ಮೀನಿನ ಘಮಘಮ!

Sep 9, 2021, 10:31 AM IST

ಉಡುಪಿ (ಸೆ. 09): ಮತ್ಸ್ಯಪ್ರಿಯರಿಗೆ ಈಗ ಸುಗ್ಗಿ, ಈಗ ತಾನೇ ಕಡಲಿನಿಂದ ಬಲೆಹಾಕಿ ಎಳೆದು ತಂದ ತಾಜಾ ತಾಜಾ ಮೀನು ತಿನ್ನಲು ಇದು ಸಕಾಲ, ಒಂದು ಕಡೆ ಜಡಿ ಮಳೆ ಸುರಿಯುತ್ತಿದ್ದರೆ, ಮಸಾಲೆ ಹಚ್ಚಿದ ಮೀನಿನ ಘಮ ಎಲ್ಲಾ ಮನೆಗಳಲ್ಲೂ ಮೂಗಿಗೆ ಹೊಡೆಯುತ್ತಿದೆ. 

ಸದ್ಯ ಪರ್ಸೀನ್ ಬೋಟುಗಳಿಗೆ ಉತ್ತಮ ಸಂಖ್ಯೆಯ ಮೀನುಗಳು ಲಭ್ಯವಾಗುತ್ತಿದ್ದು, ಮೀನಿನ ದರವೂ ಇಳಿಕೆಯಾಗಿದೆ.  ಕೆ.ಜಿ ಗೆ 180 ರುಪಾಯಿಗಳಷ್ಟಿದ್ದ ಬಂಗುಡೆಯ ದರ 120 ಕ್ಕಿಳಿದಿದೆ. ಇನ್ನು ಸಣ್ಣ ಬಂಗುಡೆ 20 ರುಪಾಯಿಗೆ ಸಿಗುತ್ತೆ. ಬಂಗುಡೆ, ಬೊಂಡಾಸ್,ಪಾಂಪ್ಲೆಟ್,  ಮಾಂಜಿ ಮೀನು ಮಾರುಕಟ್ಟೆಗೆ ಹೇರಳವಾಗಿ ಸರಬರಾಜಾಗುತ್ತಿದೆ. ಕಿಸೆ ಖಾಲಿ ಮಾಡಿಕೊಳ್ಳದೆ, ಚೀಲ ತುಂಬಾ ಮೀನು ಖರೀದಿಸಿ ಮಸಾಲೆ ಅರೆಯಲು ಕರಾವಳಿ ಮಂದಿ ಮಾರುಕಟ್ಟೆಗೆ ಮುಗಿಬೀಳುತ್ತಿದ್ದಾರೆ.