Feb 5, 2022, 6:28 PM IST
ಕುಂದಾಪುರ(ಫೆ.5): ಹಿಜಾಬ್ ವಿವಾದದಿಂದಾಗಿ ಕಳೆದ ಮೂರು ದಿನಗಳಿಂದ ರಾಷ್ಟ್ರಮಟ್ಟದಲ್ಲಿಯೂ ಸುದ್ದಿಯಾಗುತ್ತಿರುವ ಕುಂದಾಪುರದ (Kundapura) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿಕ ಇದೀಗ ಕುಂದಾಪುರದ ಮತ್ತೊಂದು ಕಾಲೇಜಿನಲ್ಲಿ ಕೂಡ ಹಿಜಾಬ್ ವಿವಾದ ನಡೆಯುವ ಲಕ್ಷಣ ಕಾಣುತ್ತಿದೆ. ಕುಂದಾಪುರದ ಬಿ.ಪಿ ಹೆಗ್ಡೆ (B.B.Hegde College) ಖಾಸಗಿ ಕಾಲೇಜಿನಲ್ಲಿ ಹಿಜಾಬ್ (Hijab) ಧರಿಸಲು ಕೋರಿ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Udupi Hijab Case: ಉಡುಪಿಯ ಹಿಜಾಬ್ ಗಲಾಟೆಗೆ ಶಿಕ್ಷಣ ಸಚಿವರ ಪ್ರತಿಕ್ರಿಯೆ
ನಾವು ಹಿಂದಿನಿಂದಲೂ ಹಿಜಾಬ್ ಧರಿಸಿಕೊಂಡು ಬರುತ್ತಿದ್ದೇವೆ ನಮ್ಮ ಧಾರ್ಮಿಕ ಹಕ್ಕು ಪಾಲಿಸಲು ಅವಕಾಶ ಕೊಡಿ ಎಂದು ಪೋಷಕರ ಜೊತೆ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದು ಮನವಿ ಮಾಡಿದ್ದಾರೆ. ಮಾತ್ರವಲ್ಲ ಪ್ರಾಶುಪಾಲರ ಜೊತೆ ಪೋಷಕರು ಸಭೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದಿಂದ ಈ ವಿವಾದ ವ್ಯಾಪಿಸುತ್ತಿದ್ದು, ಜಿಲ್ಲೆ ಯಿಂದ ಜಿಲ್ಲೆಗೆ ಇದು ವಿಸ್ತರಣೆಯಾಗುತ್ತಿದ್ದು, ಸೂಕ್ಷ್ಮ ವಾತಾವರಣ ಸೃಷ್ಟಿಯಾಗುತ್ತಿದೆ. ಉಡುಪಿಯ ಸರಕಾರಿ ಕಾಲೇಜಿನಲ್ಲಿ ಆರಂಭವಾದ ಈ ವಿವಾದ ಕುಂದಾಪುರದ ಸರಕಾರಿ ಕಾಲೇಜಿನಲ್ಲೂ ಬೆಳಕಿಗೆ ಬಂದಿತ್ತು. ಇದೀಗ ಖಾಸಗಿ ಕಾಲೇಜಿಲ್ಲೂ ವಿವಾದ ಎದ್ದಿದೆ.