ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!

ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!

Published : Jan 03, 2026, 03:04 PM IST
ಹೊಸ ವರ್ಷಕ್ಕೆ ನಟ ಪ್ರಭಾಸ್ 'ದಿ ರಾಜಾಸಾಬ್' ಮತ್ತು 'ಸ್ಪಿರಿಟ್' ಎಂಬ ಎರಡು ಹೊಸ ಚಿತ್ರಗಳೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. 'ದಿ ರಾಜಾಸಾಬ್' ಹಾರರ್ ಕಾಮಿಡಿ ಚಿತ್ರವಾಗಿದ್ದರೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದ ರಾ ಪೋಸ್ಟರ್​ನಿಂದ ಸಖತ್ ನಿರೀಕ್ಷೆ ಮೂಡಿಸಿದೆ.

ಹೊಸ ವರ್ಷಕ್ಕೆ ಡಾರ್ಲಿಂಗ್ ಪ್ರಭಾಸ್ ಹೊಸ ಅವತಾರದಲ್ಲಿ ಬರ್ತಾ ಇದ್ದಾರೆ. ಮೊದಲನೇಯದ್ದಾಗಿ ಜನವರಿ 9ಕ್ಕೆ ಪ್ರಭಾಸ್ ನಟನೆಯ ದಿ ರಾಜಾಸಾಬ್ ಸಿನಿಮಾ ತೆರೆಗೆ ಬರ್ತಾ ಇದೆ. ಇದೊಂದು ಹಾರರ್ ಫ್ಯಾಂಟಸಿ ಌಕ್ಷನ್ ಕಾಮಿಡಿ ಚಿತ್ರವಾಗಿದ್ದು, ಪ್ರಭಾಸ್ ಹೊಸ ರೂಪದಲ್ಲಿ ನೋಡೋದಕ್ಕೆ ಸಿಕ್ತಾ ಇದ್ದಾರೆ. ಇತ್ತೀಚಿಗೆ ಸಾಲು ಸಾಲು ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ರಾಜಾ ಸಾಬ್ ಆಗಿ ಹೊಸ ಅವತಾರದಲ್ಲಿ ಬರ್ತಿದ್ದಾರೆ. ದಿ ರಾಜಾ ಸಾಬ್ ಟ್ರೈಲರ್ ನೋಡಿದ ಫ್ಯಾನ್ಸ್ ಸಿನಿಮಾ ನೋಡ್ಲಿಕ್ಕೆ ಎಕ್ಸೈಟ್ ಆಗಿದ್ದಾರೆ.

ಇನ್ನೂ ದಿ ರಾಜಾ ಸಾಬ್ ಗಿಂತ ಪ್ರಭಾಸ್ ಫ್ಯಾನ್ಸ್​ಗೆ ಮತ್ತಷ್ಟು ಕಿಕ್ ಕೊಟ್ಟಿರೋದು , ವರ್ಷಾರಂಭಕ್ಕೆ ಬಂದಿರೋ ಸ್ಪಿರಿಟ್ ಪೋಸ್ಟರ್. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಪೋಸ್ಟರ್ ಸಖತ್ ರಾ ಆಗಿದ್ದು ಡಾರ್ಲಿಂಗ್ ಫ್ಯಾನ್ಸ್ ಸ್ಟನ್ ಆಗಿದ್ದಾರೆ. ತೆರೆದೆದೆಯಲ್ಲಿರೋ ಪ್ರಭಾಸ್ ಮೈಯೆಲ್ಲಾ ಗಾಯವಾಗಿವೆ,. ಅಲ್ಲಲ್ಲಿ ಬ್ಯಾಂಡೇಜ್ ಸುತ್ತಲಾಗಿದೆ. ಕೈಯಲ್ಲಿ ಮದಿರೆಯ ಗ್ಲಾಸ್ ಇದ್ರೆ , ಬಾಯಲ್ಲಿರೋ ಸಿಗರೇಟ್​ಗೆ ಸುಂದರಿ ತೃಪ್ತಿ ಕಿಡಿ ಅಂಟಿಸ್ತಾ ಇದ್ದಾರೆ.

ಸಂದೀಪ್ ರೆಡ್ಡಿ ವಂಗಾ ಈ ಹಿಂದೆ ಮಾಡಿದ ಚಿತ್ರಗಳೆಲ್ಲಾ ಚಿತ್ರವಿಚಿತ್ರ. ಹಿಂಸೆ, ರಕ್ತಪಾತ, ಮದಿರೆ, ಮಾನಿನಿ.. ಇವುಗಳಿಲ್ಲದೇ ವಂಗಾ ಸಿನಿಮಾ ಇರೋದೇ ಇಲ್ಲ. ಅದ್ರಲ್ಲೂ ವಂಗಾ ಮಾಡಿದ ಹಿಂದಿನ ಸಿನಿಮಾ ಅನಿಮಲ್​ನಲ್ಲಂತೂ ಇವೆಲ್ಲವೂ ತುಸು ಹೆಚ್ಚೇ ಇದ್ದವು. ಅನಿಮಲ್​ನಲ್ಲಿ ಸಖತ್ ಬೋಲ್ಡ್ ರೋಲ್ ಮಾಡಿದ್ದ ತೃಪ್ತಿ ದಿಮ್ರಿ, ಸ್ಪಿರಿಟ್​ನಲ್ಲಿ ಪ್ರಭಾಸ್​ಗೆ ಜೋಡಿಯಾಗಿದ್ದಾರೆ. ಫಸ್ಟ್ ಪೋಸ್ಟರ್​ನಿಂದಲೇ ಪ್ರಭಾಸ್​ ಫ್ಯಾನ್ಸ್​ಗೆ ಕಿಕ್ಕೇರಿಸಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ,

24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more