ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ "ಗಾನಬಜಾನ" ಕೂಡ ಒಂದು. ಗಾನಬಜಾನ ಸೀಸನ್ 3" ಯ ಮಜಭರಿತ ಸಂಚಿಕೆಗಳು ಇದೇ ನವೆಂಬರ್ 13 ರಿಂದ ಪ್ರತೀ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ "ಗಾನಬಜಾನ" ಕೂಡ ಒಂದು. ಈ ಹಿಂದೆ ಯಶಸ್ವೀ ಎರಡು ಸೀಸನ್ ಗಳನ್ನು ಮುಗಿಸಿರುವ 'ಗಾನಬಜಾನ' ಇದೀಗ ತನ್ನ ಮೂರನೇ ಸೀಸನ್ ನೊಂದಿಗೆ ಮತ್ತೆ ಬರಲು ಸಜ್ಜಾಗಿದೆ. ಈಗಾಗಲೇ ಶೋ ಲಾಂಚ್ ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋ ಕೂಡ ರಿಲೀಸ್ ಆಗಿದೆ. ಈ ಬಾರಿ 'ಗಾನಬಜಾನ' ದ ನಿರೂಪಣೆಯ ಜವಾಬ್ದಾರಿ ಹೊತ್ತಿರೋದು ಸ್ಟಾರ್ ಆ್ಯಂಕರ್ 'ಅಕುಲ್ ಬಾಲಾಜಿ'. ಈ ಹಿಂದೆ ಸುವರ್ಣ ವಾಹಿನಿಯ ಅನೇಕ ಸೂಪರ್ ಡೂಪರ್ ಹಿಟ್ ಶೋಸ್ ಗಳನ್ನು ನಿರೂಪಣೆ ಮಾಡಿ ಪ್ರೇಕ್ಷಕರ ಮನಗೆದ್ದ ಅಕುಲ್ ಈಗ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಲಿದ್ದಾರೆ. "ಗಾನಬಜಾನ ಸೀಸನ್ 3" ಯ ಮಜಭರಿತ ಸಂಚಿಕೆಗಳು ಇದೇ ನವೆಂಬರ್ 13 ರಿಂದ ಪ್ರತೀ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.