
ಬಿಗ್ ಬಾಸ್ 13ರ ಸ್ಪರ್ಧಿ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದೇ ಸೀಸನ್‌ನ ವಿಜೇತ ಸಿದ್ಧಾರ್ಥ್ ಶುಕ್ಲಾ ಕೂಡ ಹೃದಯಾಘಾತದಿಂದಲೇ ಮೃತಪಟ್ಟಿದ್ದರು.
ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಅಕಾಲಿಕ ಅಗಲಿಕೆ ಎಲ್ಲರಿಗೂ ಆಘಾತ ತಂದಿದೆ. ಅದ್ರಲ್ಲೂ ಹಿಂದಿಯ ಬಿಗ್ ಬಾಸ್ ಸೀಸನ್-13ನಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳ ಪೈಕಿ ಅಕಾಲಿಕ ಸಾವನ್ನಪ್ಪಿದ ಎರಡನೇ ಸ್ಪರ್ಧಿ ಇವರು. ಈ ಹಿಂದೆ ಬಿಗ್ ಬಾಸ್ ಸೀಸನ್-13ನ ವಿನ್ನರ್ ಸಿದ್ದಾರ್ಥ್ ಶುಕ್ಲಾ ಕೂಡ ಚಿಕ್ಕವಯಸ್ಸಿನಲ್ಲಿ ಪ್ರಾಣ ತೆತ್ತಿದ್ದ. ಇವರು ಮಾತ್ರ ಅಲ್ಲ ಕನ್ನಡವೂ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಮನೆಗೆ ಹೋದ ಅನೇಕ ಸ್ಪರ್ಧಿಗಳು ಚಿಕ್ಕ ವಯಸ್ಸಿನಲ್ಲೇ ಬದುಕು ಮುಗಿಸಿದ್ದಾರೆ.
ಇದೇನು ಕಾಕತಾಳೀಯವೋ.. ಅಥವಾ ಬಿಗ್ ಬಾಸ್ ಮನೆಯೇ ಶಾಪಗ್ರಸ್ತವೋ ಗೊತ್ತಿಲ್ಲ. ದೊಡ್ಮನೆಯ ಮತ್ತೊಬ್ಬ ಸ್ಪರ್ಧಿ ಚಿಕ್ಕ ವಯಸ್ಸಿನಲ್ಲಿ ಜೀವ ತೆತ್ತಿದ್ದಾರೆ. ಹಿಂದಿಯ ಬಿಗ್ ಬಾಸ್ ಸೀಸನ್ -13ನಲ್ಲಿ ಸ್ಪರ್ಧಿಯಾಗಿದ್ದ ನಟಿ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಪ್ರಾಣ ತೆತ್ತಿದ್ದಾರೆ. ಅಚ್ಚರಿ ಅಂದ್ರೆ ಶೆಫಾಲಿ ಭಾಗಿಯಾಗಿದ್ದ ಬಿಗ್ ಬಾಸ್ ಸೀಸನ್-13ನಲ್ಲಿ ವಿನ್ನರ್ ಆಗಿದ್ದ ಸಿದ್ದಾರ್ಥ್ ಶುಕ್ಲಾ ಕೂಡ 3 ವರ್ಷಗಳ ಹಿಂದೆ ಹೃದಯಾಘಾತದಿಂದಲೇ ಪ್ರಾಣ ಬಿಟ್ಟಿದ್ದ. ಆಗ ಸಿದ್ದಾರ್ಥ್ಗೆ ಜಸ್ಟ್ 40 ವರ್ಷ ವಯಸ್ಸು.