Harsha Murder Case: ಹಂತಕರನ್ನು ಹುಡುಕಿ ಹುಡುಕಿ ಗಲ್ಲಿಗೇರಿಸಲಾಗುತ್ತೆ: ತೇಜಸ್ವಿ ಸೂರ್ಯ

Feb 23, 2022, 1:38 PM IST

ಬೆಂಗಳೂರು (ಫೆ. 23): ದುಷ್ಕರ್ಮಿಗಳ ಕೈಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ (Harsha) ಕುಟುಂಬಕ್ಕೆ ಸಾಂತ್ವನ ಹೇಳಲು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ನಾಯಕರ ದಂಡು ಮನೆಯತ್ತ ಹರಿದುಬರುತ್ತಿದೆ. ಸಂಸದ ತೇಜಸ್ವಿ ಸೂರ್ಯ ಹರ್ಷ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 

Shivamogga: ನನ್ನ ಮಗ ತಪ್ಪು ಮಾಡಿಲ್ಲ, ಸುಮ್ಮನೆ ಅರೆಸ್ಟ್ ಮಾಡಿದ್ದಾರೆ: ಬಂಧಿತನ ತಾಯಿ ಆರೋಪ

'ಹರ್ಷನದ್ದು ಮರ್ಡರ್ ಅಲ್ಲ, ಇದು ಭಯೋತ್ಪಾದಕ ಕೃತ್ಯ. ಹೀಗೆ ಮೊಕದ್ದಮೆ ದಾಖಲಿಸಬೇಕು. ರಾಜ್ಯದಲ್ಲಿರೋದು ಹಿಂದುತ್ವದ ಚಿಂತನೆ ಇರುವ ಸರ್ಕಾರ. ಈ ಕೃತ್ಯದ ಹಿಂದಿರುವವರನ್ನು ಸರ್ಕಾರ ಹುಡುಕಿ ಹುಡುಕಿ ಗಲ್ಲಿಗೇರಿಸುವ ಕೆಲಸ ಸರ್ಕಾರ ಮಾಡುತ್ತೆ' ಎಂದು ತೇಜಸ್ವಿ ಸೂರ್ಯ ಜನರನ್ನುದ್ದೇಶಿಸಿ ಮಾತನಾಡಿದರು.