Feb 21, 2022, 4:30 PM IST
ಬೆಂಗಳೂರು (ಫೆ. 21): ಹಿಂದೂಪರ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ಹೆಚ್ಚಾಗುತ್ತಿದೆ. ಇನ್ನೊಂದೆಡೆ ತನಿಖೆ ಚುರುಕುಕೊಂಡಿದೆ.
'ಹರ್ಷನ ಪಾರ್ಥೀವ ಶರೀರ ಮೆರವಣಿಗೆಗೆ ಅವಕಾಶ ಇಲ್ಲ. ಈಗಾಗಲೇ ಡಿಸಿ, ಎಸ್‌ಪಿಯವರು ಆದೇಶಿಸಿದ್ದಾರೆ. ಸಣ್ಣ ಪುಟ್ಟ ಗಲಾಟೆ ಮಾಡಿದವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಶಾಂತಿ ಸುವವ್ಯಸ್ಥೆ ಕದಡಲು ನಾವು ಬಿಡಲ್ಲ. ಯಾರೂ ಕಾನೂನು ಕೈಗೆತ್ತಿಕೊಳ್ಳಲು ಬಿಡಲ್ಲ' ಎಂದು ಎಡಿಜಿಪಿ ಮುರುಗನ್ ಹೇಳಿದ್ದಾರೆ.