Aug 6, 2023, 11:54 AM IST
KRS ಹಳೇ ಮೈಸೂರು ಭಾಗದ ಜೀವನಾಡಿ. ಈ ಕೆಆರ್‌ಎಸ್ ಡ್ಯಾಂ (KRS dam) ತುಂಬಿದ್ರೆ ಮೈಸೂರು, ಬೆಂಗಳೂರಿಗರಿಗೆ(Bengaluru) ನೀರಿನ ಬವಣೆ ತಪ್ಪುತ್ತೆ. ಅದರಲ್ಲೂ ಜುಲೈ ಮಧ್ಯಭಾಗದಲ್ಲಿ ಸುರಿದ ಮಳೆಯಿಂದ(rain) ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್‌ಗೂ ನೀರು ಹರಿದು ಬಂದಿತ್ತು. ಬೆಂಗಳೂರಿನ ಜನ ನಿಟ್ಟುಸಿರು ಬಿಟ್ಟಿದ್ರು.. ಇತ್ತ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ರು..ಆದ್ರೆ ಈಗ ಮಳೆಯೂ ನಿಂತಿದೆ. ತಮಿಳುನಾಡು(Tamilnadu) ಕ್ಯಾತೆ ತೆಗೆದು ನೀರು ಬಿಡುಗಡೆ ಮಾಡಿಸಿಕೊಳ್ಳುತ್ತಿದೆ. ಇದು ಅನ್ನದಾತರನ್ನ ಸಂಕಷ್ಟಕ್ಕೆ ಈಡುಮಾಡಿದೆ. ತಮಿಳುನಾಡಿಗೆ ರಾಜ್ಯ ಸರ್ಕಾರ 5 ಸಾವಿರ ಕ್ಯೂಸೆಕ್ ನೀರು ಬಿಟ್ಟಿದೆ. ಇನ್ನು ಹೆಚ್ಚಿನ ನೀರಿಗಾಗಿ ಕೇಂದ್ರಕ್ಕೆ ಮೊರೆ ಇಟ್ಟಿದೆ. ಯಾವಾಗ ತಮಿಳುನಾಡು ಕೇಂದ್ರದ ಬಾಗಿಲು ತಟ್ತು, ಇತ್ತ ನಾಲೆಗಳಿಗೆ ಹರಿಸಲಾಗ್ತಿದ್ದ ನೀರನ್ನ ಕಾವೇರಿ ನಿಗಮದ ಅಧಿಕಾರಿಗಳು ಬಂದ್ ಮಾಡಿದ್ದಾರೆ. ಒಂದು ಕಡೆ ಬೆಂಗಳೂರಿಗೆ ನೀರು ಬೇಕು..ಮತ್ತೊಂದೆಡೆ ರೈತರಿಗೆ ನೀರು ಬಿಡಬೇಕು..ಇತ್ತ ತಮಿಳುನಾಡು ಕೂಡ ಕ್ಯಾತೆ ತೆಗೆದಿದೆ ಇದ್ರಿಂದ ರಾಜ್ಯ ಸರ್ಕಾರಕ್ಕೆ ತ್ರಿಶಂಕು ಸ್ಥಿತಿ ಎದುರಾಗಿದ್ದು..ಬೆಂಗಳೂರಿಗೆ ಕುಡಿಯೋ ನೀರಿನ ಸಂಕಷ್ಟ ಎದುರಾಗುತ್ತಿದೆ.
ಇದನ್ನೂ ವೀಕ್ಷಿಸಿ: ಕವಾಡಿಗಾರಹಟ್ಟಿಗೆ ದಿನೇಶ್ ಗುಂಡೂರಾವ್ ಭೇಟಿ: ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಚೆಕ್ ವಿತರಣೆ