Dec 4, 2024, 11:17 PM IST
ಉತ್ತರಕನ್ನಡ ಜಿಲ್ಲೆಯ ಪಶ್ಚಿಮಘಟ್ಟದಲ್ಲಿ ಭೂಕಂಪನವಾಗಿದೆ. ಕುಮಟಾ, ಶಿರಸಿ, ಯಲ್ಲಾಪುರ ಭಾಗದ ಹಲವೆಡೆ ಭೂ ಕಂಪನವಾಗಿದೆ.ಸುಮಾರು 3 ಸೆಕೆಂಡ್‌ಗಳ ಕಾಲ 5 ಬಾರಿ ಭೂಮಿ ಕಂಪಿಸಿದೆ. ಭೂ ಕಂಪನವಾದ ಸ್ಥಳದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಗುಡ್ಡಗಳನ್ನೇ ನೇರವಾಗಿ ಕಟ್ ಮಾಡಿರುವ ಗುತ್ತಿಗೆದಾರರು ರಸ್ತೆ ಕಾಮಾಗಾರಿ ನಡೆಸುತ್ತಿದ್ದಾರೆ. ಅಧಿಕಾರಿಗಳ ಸಮನ್ವಯ ಕೊರತೆ, ನಿರ್ಲಕ್ಷ್ಯಕ್ಕೆ ಪ್ರಾಕೃತಿಕ ಸೌಂದರ್ಯದ ಉತ್ತರ ಕನ್ನಡ ನೆಲಸಮದ ಭೀತಿ ಎದುರಿಸುತ್ತಿದೆ. ಪರಿಸರ ಹಾಳುಮಾಡಿ ಮಾಡಲಾಗುತ್ತಿರುವ ಕಾಮಗಾರಿಗೆ ಭೂಕಂಪನ ಮೂಲಕ ಪ್ರಕೃತಿ ಎಚ್ಚರಿಕೆ ಸಂದೇಶ ನೀಡಿದೆಯಾ?