ಪುನೀತ್ ರಾಜ್‌ಕುಮಾರ್ ಯುವ ಪೀಳಿಗೆಗೆ ಬೇರೆ ಬೇರೆ ರೀತಿಯಲ್ಲಿ ಮಾದರಿಯಾಗಿದ್ದಾರೆ. ಅವರ ಜೀವನ, ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಅವರ ವ್ಯಕ್ತಿತ್ವದ ಬಗ್ಗೆ ಮಾತುಗಳನ್ನು ಕೇಳುತ್ತಿದ್ದರೆ ಹೆಮ್ಮೆ ಎನಿಸುತ್ತದೆ.
ಬೆಂಗಳೂರು (ನ. 07): ಪುನೀತ್ ರಾಜ್‌ಕುಮಾರ್ (Puneeth Rajkumar) ಯುವ ಪೀಳಿಗೆಗೆ ಬೇರೆ ಬೇರೆ ರೀತಿಯಲ್ಲಿ ಮಾದರಿಯಾಗಿದ್ದಾರೆ. ಅವರ ಜೀವನ, ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಅವರ ವ್ಯಕ್ತಿತ್ವದ ಬಗ್ಗೆ ಮಾತುಗಳನ್ನು ಕೇಳುತ್ತಿದ್ದರೆ ಹೆಮ್ಮೆ ಎನಿಸುತ್ತದೆ.
ಪುನೀತ್ ರಾಜಕೀಯಕ್ಕೆ ಬರಬೇಕು ಎಂಬುದು ಹಲವರ ಅಪೇಕ್ಷೆಯಾಗಿತ್ತು. ಆದರೆ ಅವರು ಅದ್ಯಾಕೋ ರಾಜಕೀಯದ ಕಡೆ ಒಲವು ತೋರಲಿಲ್ಲ. 'ಜನರನ್ನು ಆಳುವವರಿಗೆ ಪೊಲಿಟಿಕಲ್ ಪವರ್ ಬೇಕು, ನಾವು ಜನರನ್ನು ಪ್ರೀತಿಸುವವರು ವಿಲ್ ಪವರ್ ಇದ್ರೆ ಸಾಕು' ಎಂಬುದು ಫೇಮಸ್ ಡೈಲಾಗ್. ಅದರಂತೆ ನಡೆದುಕೊಂಡರು. ಅಪ್ಪು ಅವರನ್ನು ರಾಜಕೀಯಕ್ಕೆ ಕರೆ ತರಲು ಸಾಕಷ್ಟು ಪ್ರಯತ್ನಿಸಿದೆವು. ಆದರೆ ಅವರೇ ಬರಲಿಲ್ಲ ಎಂದು ಡಿಕೆಶಿ ಹೇಳಿದರು.