ಮಲಗಿದ್ದಲ್ಲೇ ಪ್ರಾಣ ಬಿಟ್ಟ ವಿಜಯ ರಾಘವೇಂದ್ರ ಪತ್ನಿ, ನಾಳೆ ಬೆಂಗಳೂರಿಗೆ ಪಾರ್ಥೀವ ಶರೀರ, ಬುಧವಾರ ಅಂತ್ಯಕ್ರಿಯೆ, ಆಘಾತದಲ್ಲಿರುವ ವಿಜಯ ರಾಘವೇಂದ್ರ ಕುಟುಂಬಕ್ಕೆ ಗಣ್ಯರಿಂದ ಸಾಂತ್ವನ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಇದೀಗ ಮತ್ತೆ ದೇಶದ ಆರೋಗ್ಯ ಸಮಸ್ಯೆಯನ್ನು ಚರ್ಚಿಸುವಂತೆ ಮಾಡಿದೆ. ಚಿರಂಜೀವಿ ಸರ್ಜಾ, ಪುನೀತ್ ರಾಜ್ ಕುಮಾರ್, ಸಿದ್ಧಾರ್ಥ್ ಶುಕ್ಲಾ ಸೇರಿದಂತೆ ಹಲವು ಸೆಲೆಬ್ರೆಟಿಗಳು ಚಿಕ್ಕ ವಯಸ್ಸಿನಲ್ಲೇ ನಿಧನರಾಗಿದ್ದಾರೆ. ಬಹುತೇಕ ಎಲ್ಲಾ ಸೆಲೆಬ್ರೆಟಿಗಳು ಫಿಟ್ನೆಸ್ ಕುರಿತು ತುಂಬಾ ಕಾಳಜಿ ವಹಿಸಿದ್ದರು. ಉತ್ತಮ ಆಹಾರ ಪದ್ಧತಿ ರೂಢಿಸಿಕೊಂಡಿದ್ದರು. ವ್ಯಾಯಾಮ, ನಿಗದಿತ ಸಮಯದಲ್ಲಿ ಆರೋಗ್ಯ ತಪಾಸಣೆಯನ್ನೂ ಮಾಡಿದ್ದಾರೆ. ಆದರೂ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಇಂದಿನ ಲೈಫ್‌ಸ್ಟೈಲ್ ಕಾರಣವೇ? ಅಥವಾ ನಿಯಂತ್ರಣಕ್ಕೂ ಸಿಗದೆ ಕಾರಣಗಳಿವೆಯಾ? ತಜ್ಞರು ಹೇಳುವುದೇನು?