ಚಿನ್ನದ ಬಿಸ್ಕೆಟ್, ಕ್ರಿಪ್ಟೋ ಕರೆನ್ಸಿ, ಹವಾಲಾ: 187 ಕೋಟಿ ಹಗರಣದ ಶಿಕಾರಿ ವೇಳೆ ಬಯಲಾದ ಆ ರಹಸ್ಯವೇನು?

Jul 11, 2024, 2:33 PM IST

ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ಯೂನಿಯನ್ ಬ್ಯಾಂಕ್'ಗೆ ವರ್ಗಾವಣೆಯಿಸುವಂತೆ ಒತ್ತಡ ಹೇರಿದ್ದೇ ಮಾಜಿ ಸಚಿವ ನಾಗೇಂದ್ರ ಅಂತ ಹೇಳಲಾಗ್ತಾ ಇದೆ.  ಇದೇ ವಿಚಾರವಾಗಿ ದೊಡ್ಡದೊಂದು ಕಂಟಕ, ನಾಗೇಂದ್ರ ಅವರನ್ನ ಕಾಡ್ತಾ ಇದೆ. ಇದು ಬರೀ ನಾಗೇಂದ್ರ ಪಾಲಿಗೆ ಮಾತ್ರವಲ್ಲದೇ, ಇಡೀ ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಡೋ ಸಾಧ್ಯತೆ ಇದೆ. ಏಳು ತಿಂಗಳ ಹಿಂದೆ, ಅಂದ್ರೆ ಕಳೆದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಸ್ಟಾರ್ ಹೋಟೆಲ್'ನಲ್ಲಿ ಈ ಡೀಲ್ ಕುದುರಿರೋ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಬೃಹತ್ ಹಗರಣದ ರಣಬೇಟೆಯಾಡೋಕೆ SIT, CBI, ED ಮುಂದಾಗಿವೆ.  187 ಕೋಟಿ ಹಗರಣದ ತನಿಖೆ ನಡೆಸೋಕೆ 18 ಕಡೆ ಶೋಧ ಕಾರ್ಯ ನಡೆದಿದೆ. ಈ ಪ್ರಕರಣದ ಬೆನ್ನಲ್ಲೇ ಚಿನ್ನದ ಬಿಸ್ಕೆಟ್, ಕ್ರಿಪ್ಟೋ ಕರೆನ್ಸಿ, ಹವಾಲಾ, ಅನ್ನೋ ಅಸಾಮಾನ್ಯ ಪದಗಳೂ ಸದ್ದು ಮಾಡ್ತಾ ಇದಾವೆ.  ಇತ್ತೀಚಿಗೆ ಆಡಿಯೋ ಬಾಂಬ್ ಬ್ಲಾಸ್ಟ್ ಆಯ್ತು. ಅದರ ಬೆನ್ನಲ್ಲೇ ಮಾಜಿ ಸಚಿವರ ಪಿಎ ಅರೆಸ್ಟ್ ಆಯ್ತು.. ಇನ್ನೂ ಏನೇನು ಕಾದಿದೆಯೋ.. ಅನ್ನೋ ಅನುಮಾನ ಮೂಡಿದೆ.. ಈ ಬೆಳವಣಿಗೆನೆಲ್ಲಾ ನೋಡ್ತಾ ಇದ್ರೆ, ಶಿಕಾರಿ ವೇಳೆ ಬಯಲಾದ ಆ ರಹಸ್ಯ, ಮಾಜಿ ಸಚಿವರಿಗೇ ಕುತ್ತು ತಂದಿತಾ ಅನ್ನೋ ಪ್ರಶ್ನೆ ಮೂಡುತ್ತೆ. ಅದಕ್ಕೆಲ್ಲಾ ಉತ್ತರವೇ ಇವತ್ತಿನ ಸುವರ್ಣ ಫೋಕಸ್ ವೀಕ್ಷಿಸಿ '1st ವಿಕೆಟ್ ಡೌನ್'