ಬಿಎಂಟಿಸಿ ಚಾಲಕರ ಹೃದಯಕ್ಕೆ ಕಾದಿದೆ ಆಪತ್ತು: ಜಯದೇವ ವೈದ್ಯರ ಶಾಕಿಂಗ್ ವರದಿ ಬಯಲು

ಬಿಎಂಟಿಸಿ ಚಾಲಕರ ಹೃದಯಕ್ಕೆ ಕಾದಿದೆ ಆಪತ್ತು: ಜಯದೇವ ವೈದ್ಯರ ಶಾಕಿಂಗ್ ವರದಿ ಬಯಲು

Published : Nov 06, 2023, 11:03 AM IST

BMTC ಬಸ್ ಓಡಿಸುತ್ತಿರುವ ಚಾಲಕರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಸಂಸ್ಥೆಗಾಗಿ ಹಗಲು-ರಾತ್ರಿ ದುಡಿಯುತ್ತಿರುವ ಬಹತೇಕ ಡ್ರೈವರ್ ಗಳ ಹೃದಯ ಅಪಾಯದಲ್ಲಿಯಂತೆ. ಜಯದೇವ ಆಸ್ಪತ್ರೆ ವೈದ್ಯರ ವರದಿಯಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ.
 

ಬಸ್‌ಗಳ ಕೊರತೆ, ಓವರ್ ಟೈಂ ಡ್ಯೂಟಿ, ಹಬ್ಬದ ದಿನವೂ ಕೆಲಸ, ಸದಾ ಕಿರಿಕಿರಿ, ಒತ್ತಡ ಇದು ಬಿಎಂಟಿಸಿ ಚಾಲಕರು(BMTC Drivers) ಹಾಗೂ ನಿರ್ವಹಕರ ನಿತ್ಯದ ಗೋಳು. ಶಕ್ತಿ ಯೋಜನೆ (Shakti Scheme) ಜಾರಿಯಾದ ನಂತರ ಈ ಸಮಸ್ಯೆ ದುಪ್ಪಟ್ಟಾಗಿದೆ. ಬಸ್‌ಗಳ ಶಾರ್ಟೇಜ್ ನಡುವೆ ಬಿಎಂಟಿಸಿ ಜನರಿಗಾಗಿ ಇರೋ‌ ಬಸ್ ನಲ್ಲಿಯೇ ಹೆಚ್ಚುವರಿ ಟ್ರಿಪ್ ಮಾಡಿಸ್ತಿದೆ. ಇದು ಚಾಲಕರ ಜೀವಕ್ಕೆ ಆಪತ್ತು ಎದುರಾಗುವ ಆತಂಕ ಮೂಡಿಸಿದೆ. ಬಿಎಂಟಿಸಿ ಚಾಲಕರು ಹೃದ್ರೋಗದ(Heart attack) ಅಪಾಯದಲ್ಲಿದ್ದಾರೆ. ಬಿಎಂಟಿಸಿ ಚಾಲಕರ ಪೈಕಿ ಶೇಕಡ 40-50ರಷ್ಟು ಜನ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಜಯದೇವ ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣೆಯಿಂದ ಬೆಳಕಿಗೆ ಬಂದಿದೆ. ಜಯದೇವ ಆಸ್ಪತ್ರೆಯಲ್ಲಿ ಕಳೆದ 12 ತಿಂಗಳಿನಲ್ಲಿ 8 ಸಾವಿರದ 200 ಬಿಎಂಟಿಸಿ ಚಾಲಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ತಪಾಸಣೆಗೆ ಒಳಗಾದ ಶೇಕಡಾ 40 ರಷ್ಟು ಚಾಲಕರಿಗೆ ಮಧುಹೇಹ ಇರೋದು ಪತ್ತೆಯಾಗಿದೆ. ಇಷ್ಟೇ ಅಲ್ಲಾ ಶೇ. 40 ರಷ್ಟು ಚಾಲಕರಿಗೆ ಅಧಿಕದೊತ್ತಡ, ಶೇ. 62 ರಷ್ಟು ಚಾಲಕರಿಗೆ ಹೈ ಕೊಲೆಸ್ಟಲ್ ಪತ್ತೆಯಾಗಿದೆ.  ಭವಿಷ್ಯದಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗೆ ಒಳಗಾಗಲಿದ್ದಾರೆ ಅಂತ ವೈದ್ಯರ ಎಚ್ಚರಿಕೆ ನೀಡಿದ್ದಾರೆ. ಇನ್ನು ನೌಕರರಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಇತ್ತಿಚಿನ‌ ದಿನದಲ್ಲಿ ಹಠಾತ್ ಹೃದಯಘಾತದಿಂದ ಸಾಯುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಇದರಲ್ಲಿ ಬಿಎಂಟಿಸಿ ನೌಕರರೇ ಹೆಚ್ಚಾಗಿರೋದು ಆಘಾತಕಾರಿ ಸಂಗತಿ. ಹೀಗಾಗಿ ಹೃದಯದ ಬಗ್ಗೆ ಕಾಳಜಿ ವಹಿಸೋದು ಅಗತ್ಯ ಅಂತಾರೆ ತಜ್ಞರು.

ಇದನ್ನೂ ವೀಕ್ಷಿಸಿ:  ರಾಜಧಾನಿ ಬೆಂಗಳೂರಿಗೆ ಶುರುವಾಯ್ತು ಚಿರತೆ ಕಾಟ! ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತೊಂದು ಪ್ರತ್ಯಕ್ಷ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more