Aug 20, 2023, 11:31 AM IST
ಪಂಚ ಗ್ಯಾರಂಟಿ ಯೋಜನೆಗಳಿಂದಲೇ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್(Congress) ಕೊಟ್ಟ ಮಾತಂತೆ ಗ್ಯಾಂರಟಿಗಳನ್ನ(Guarantee) ಜಾರಿ ಮಾಡಿದೆ. ಆದ್ರೆ ಗೃಹಜ್ಯೋತಿ ಯೋಜನೆ(Gruha Jyoti Yojana) ಮಾತ್ರ ಇನ್ನು ಗೊಂದಲದ ಗೂಡಾಗಿಯೇ ಉಳಿದಿದೆ. ಗೃಹಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಬಿಲ್ ಬಂದಿದೆ. ಜೀರೋ ಬಿಲ್ ಬರುತ್ತೆಂದು ಕಾದು ಕುಳಿತದ್ದ ಫಲಾನುಭವಗಳಿಗೆ ಶಾಕ್ ಕೊಟ್ಟಿದೆ. ಸರ್ಕಾರದ ಆದೇಶದಂತೆ ಜುಲೈ 27ರೊಳಗೆ ಅರ್ಜಿ ಸಲ್ಲಿದ್ದವರಲ್ಲಿ 21 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದಾರೆ. ಕಳೆದ ತಿಂಗಳು ಒಟ್ಟು 1 ಕೋಟಿ 40 ಲಕ್ಷ 31 ಸಾವಿರದ 320 ಜನ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ರು. ಅದ್ರಲ್ಲಿ 1 ಕೋಟಿ 19 ಲಕ್ಷ ಜನರಿಗೆ ಈಗಾಗಲೇ ಬಿಲ್ ಬಂದಿದ್ದು, 74 ಲಕ್ಷದ 8 ಸಾವಿರದ 769 ಮಂದಿಗೆ ಮಾತ್ರ ಶೂನ್ಯ ಬಿಲ್ ಇಶ್ಯೂ ಆಗಿದೆ. ಇನ್ನುಳಿದಂತೆ 45 ಲಕ್ಷದ 29 ಸಾವಿರ 633 ಜನರು ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ದಾರೆ. ವಾರ್ಷಿಕ ಸರಾಸರಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದವರಿಗೆ ಬಿಲ್ ನೀಡಲಾಗಿದೆ..
ಇದನ್ನೂ ವೀಕ್ಷಿಸಿ: Weekly Horoscope: ಇಡೀ ವಾರದ ಭವಿಷ್ಯ ಹೀಗಿದ್ದು, ನಿಮ್ಮ ರಾಶಿಯ ಶುಭ-ಅಶುಭ ಫಲಗಳು ಹೀಗಿವೆ..