Feb 22, 2022, 5:16 PM IST
ಬೆಂಗಳೂರು (ಫೆ.22): ಭಜರಂಗದಳ (Bhajaranga dal)ಸಂಘಟನೆಯ ಸದಸ್ಯ ಹರ್ಷ (Harsha) ಅವರ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳನ್ನು ಎನ್ ಕೌಂಟರ್ (Encounter)ಮಾಡಬೇಕು ಎನ್ನುವ ಆಗ್ರಹ ಜೋರಾಗಿದೆ. ಶಾಸಕ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯಬಳಿಕ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (BJP Prez Nalin Kumar Kateel )ಕೂಡ, ಈ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಪಾತಕ ಕೃತ್ಯಗಳು ಮಿತಿಮೀರಿದಾಗ ಅಲ್ಲಿನ ಸರ್ಕಾರ ಎನ್ ಕೌಂಟರ್ ಅಸ್ತ್ರವನ್ನು ಉಪಯೋಗಿಸಿತ್ತು. ಆಗ ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಅದೇ ರೀತಿಯ ಕ್ರಮವನ್ನು ಇಲ್ಲಿನ ಸರ್ಕಾರವವೂ ಕೈಗೊಳ್ಳಬೇಕು ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹರ್ಷ ಹತ್ಯೆಯ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಶಕ್ತಿ ಇರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಈ ಹಂತದಲ್ಲಿ ರಾಜ್ಯದಲ್ಲಿ ಕಠೋರ ಕ್ರಮ ಕೈಗೊಂಡರೂ ಯಾವುದೇ ತಪ್ಪಿಲ್ಲ. ಅದರೊಂದಿಗೆ ರಾಜ್ಯದಲ್ಲಿ ಅಹಿತಕರ ಘಟನೆ ಕೈಗೊಳ್ಳುವ ಪ್ರಯತ್ನ ಮಾಡುತ್ತಿರುವ ಅಂತಾರಾಷ್ಟ್ರೀಯ ಶಕ್ತಿಗಳ ಬಗ್ಗೆಯೂ ತನಿಖೆ ಆಗಬೇಕು ಎಂದಿದ್ದಾರೆ.