ರಾಘವೇಂದ್ರ ಸ್ವಾಮಿ 352ನೇ ಆರಾಧನೆ ಮಹೋತ್ಸವ: ಮಂತ್ರಾಲಯದಲ್ಲಿ ರಾಯರ ಭಕ್ತರ ಸಂಭ್ರಮವೋ ಸಂಭ್ರಮ

ರಾಘವೇಂದ್ರ ಸ್ವಾಮಿ 352ನೇ ಆರಾಧನೆ ಮಹೋತ್ಸವ: ಮಂತ್ರಾಲಯದಲ್ಲಿ ರಾಯರ ಭಕ್ತರ ಸಂಭ್ರಮವೋ ಸಂಭ್ರಮ

Published : Sep 01, 2023, 10:45 AM IST

ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ಸಪ್ತರಾತ್ರೋತ್ಸವದ ಸಂಭ್ರಮದ ನಿಮಿತ್ಯವಾಗಿ ಪೂರ್ವಾರಾಧನೆ ಆಚರಣೆ ಆರಂಭವಾಗಿದೆ. ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಯರ ಆರಾಧನೆ ಕಳೆಕಟ್ಟುತ್ತಿದೆ.
 

ಮಂತ್ರಾಲಯದಲ್ಲಿ ಈಗ ಸಂಭ್ರಮವೋ ಸಂಭ್ರಮ.. ತುಂಗಾ ತಟದಲ್ಲಿ ರಾಯರ ಆರಾಧನಾ ಮಹೋತ್ಸವ(Aradhana Mahotsava) ಕಳೆಗಟ್ಟಿದೆ. ಗುರು ರಾಘವೇಂದ್ರ ಸ್ವಾಮಿ 352ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಇಂದು ಪೂರ್ವಾರಾಧನೆಯ ಸಡಗರವಿದ್ದು,  ಬೆಳಗ್ಗೆಯಿಂದಲೇ ನಾನಾ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಗುರುವಾರ ವಿಶೇಷವಾಗಿ ನಿರ್ಮಾಲ್ಯ ವಿಸರ್ಜನ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು. ಇದೇ ಮೊದಲ ಬಾರಿಗೆ ತಮಿಳುನಾಡಿನ ಶ್ರೀರಂಗಂನ ಶ್ರೀ ರಂಗನಾಥ ದೇವಸ್ಥಾನದಿಂದ ಮತ್ತು ಆಂಧ್ರಪ್ರದೇಶದ ಅಹೋಬಲ ಕ್ಷೇತ್ರದಿಂದ ಬಂದ ಶೇಷವಸ್ತ್ರವನ್ನ ರಾಯರಿಗೆ ಅರ್ಪಿಸಲಾಯ್ತು. ಪೂರ್ವಾರಾಧನೆ ಆಗಮಿಸಿದ ಆಂಧ್ರಪ್ರದೇಶದ ರಾಜ್ಯಪಾಲರಾದ ನ್ಯಾ. ಅಬ್ದುಲ್ ನಜೀರ್ ಶ್ರೀಮಠದ ಸಂಪ್ರದಾಯದಂತೆ ವೇಷಧರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ(Raghavendra Swamy) ದರ್ಶನ ಪಡೆದರು.ಆ ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ವಾನ್ ರಾಮವಿಠಲಾಚಾರ್ಯ, ವಿದ್ವಾನ್ ಡಾ.ಗರಿಕಿಪಾಟಿ ನರಸಿಂಹರಾವ್ , ಎನ್. ಚಂದ್ರಶೇಖರನ್, ವಿಶ್ವನಾಥ ಕರಾಡ್ ಅವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು.

ಇದನ್ನೂ ವೀಕ್ಷಿಸಿ:  Today Horoscope: ಇಂದು ರಾಯರ 352ನೇ ಆರಾಧನಾ ಮಹೋತ್ಸವ..ಈ ರೀತಿಯಾಗಿ ಮನೆಯಲ್ಲೇ ಪೂಜಿಸಿ

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more