ಪಿಎಸ್‌ಐ ನೇಮಕಾತಿ ಹಗರಣ: ತುಮಕೂರು, ಮಂಗಳೂರಿನ ಕೇಂದ್ರಗಳಲ್ಲೂ ಅಕ್ರಮ?

May 6, 2022, 7:36 PM IST

ಬೆಂಗಳೂರು (ಮೇ.6): ಬಗೆದಷ್ಟು ಬಯಲಾಗ್ತಿದೆ ಪಿಎಸ್ಐ ನೇಮಕಾತಿ ಹಗರಣ (PSI recruitment Scam). ಬೆಂಗಳೂರು (Bengaluru) ಹಾಗೂ ಕಲಬುರಗಿ (Kalaburagi)ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಅಕ್ರಮದ ವಾಸನೆ ಬಂದಿದೆ. ಇಲ್ಲಿಯವರೆಗೂ ಈ ಹಗರಣ ಬೆಂಗಳೂರು ಹಾಗೂ ಕಲಬುರಗಿಗೆ ಮಾತ್ರವೇ ಸೀಮಿತವಾಗಿತ್ತು. ಆದರೆ, ಈಗ ತುಮಕೂರು (Tumkur) ಹಾಗೂ ಮಂಗಳೂರಿನ (Manglore) ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿದೆ ಎಂದು ಹೇಳಲಾಗಿದೆ.

ಪರೀಕ್ಷಾ ಕೇಂದ್ರಗಳ ಬಗ್ಗೆ ಸಿಐಡಿ ಅನುಮಾನ ವ್ಯಕ್ತಪಡಿಸಿತ್ತು. ಮಂಗಳೂರು ಹಾಗೂ ತುಮಕೂರು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿ ಎಲ್ಲಿ ಕುಳಿತುಕೊಳ್ಳಬೇಕು ಎನ್ನುವ ವಿಚಾರದಿಂದಲೇ ಅಕ್ರಮ ನಡೆದಿದೆ ಎಂದು ಹೇಳಲಾಗಿದೆ. ಈ ಎರಡೂ ಜಿಲ್ಲಾ ಕೇಂದ್ರಗಳ ಪರೀಕ್ಷಾ ಕೇಂದ್ರದಲ್ಲಿ ಸಿಐಡಿ (CID) ತಪಾಸಣೆ ನಡೆಸಲು ಆರಂಭಿಸಿದೆ. 

PSI Scam, ಕೋರ್ಟ್‌ ಅನುಮತಿ, ಬಂಧನದಲ್ಲಿರುವ ಅಭ್ಯರ್ಥಿಗಳಿಗೆ ಶಾಕ್

ರಾಜ್ಯಾದ್ಯಂತ ಒಟ್ಟು 40 ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ಅನುಮಾನ ವ್ಯಕ್ತಪಡಿಸಿದೆ. ಒಟ್ಟಾರೆ ಪರೀಕ್ಷೆ ನಡೆದ 92 ಕೇಂದ್ರಗಳ ಪೈಕಿ 40 ಕೇಂದ್ರಗಳಲ್ಲಿ ಡೀಲ್ ನಡೆದಿದೆ ಎಂದು
ಹೇಳಲಾಗಿದೆ. ಸಿಐಡಿಯಿಂದ ಎಲ್ಲಾ ಕೇಂದ್ರದ ಅಭ್ಯರ್ಥಿಗಳ ಒಎಂಆರ್ ಶೀಟ್ ಅನ್ನು ಪರಿಶೀಲನೆಗೆ ಒಳಪಡಿಸಿದೆ.