News Hour: ಕಾಂಗ್ರೆಸ್‌ನಲ್ಲಿ ಈಗ ‘ಪವರ್​’ ಫೈಟ್..!

Jan 7, 2025, 11:58 PM IST

ಬೆಂಗಳೂರು (ಜ.7): ಕಾಂಗ್ರೆಸ್‌ನಲ್ಲಿ  ಬಣ ಬಡಿದಾಟ ಜೋರಾಗಿದೆ. ಡಿಕೆಶಿ ಪವರ್ ಕಟ್‌ಗೆ ಸಿದ್ದರಾಮಯ್ಯ ಬಣ ರಣತಂತ್ರ ಹೂಡಿತ್ತು. ಡಿಸಿಎಂ ದೂರಿನ ಬೆನ್ನಲ್ಲೇ ಪರಮೇಶ್ವರ್ ಡಿನ್ನರ್ ಸಭೆಯೇ ರದ್ದು ಮಾಡಲಾಗಿದೆ.

ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್‌ ಅವರ ಶಕ್ತಿ ಕುಂದಿಸೋ ರಣತಂತ್ರವಾಗುತ್ತಿದೆ. ಶತಾಯಗತಾಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೇಬೇಕು ಎನ್ನುವ ಪ್ರಯತ್ನ ನಡೆಯುತ್ತಿದೆ. 2028ರ ಚುನಾವಣೆಗೆ ನಾನೇ ಸಿಎಂ ಅಭ್ಯರ್ಥಿ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಒಂದೆಡೆ ಕಾಂಗ್ರೆಸ್‌ನಲ್ಲಿ ಡಿಕೆಶಿ ವರ್ಸಸ್‌ ಸಿದ್ದರಾಮಯ್ಯ ಬಣವಾಗಿದ್ದರೆ, ಇನ್ನೊಂದೆಡೆ ಸಿಎಂ ಕೂಗು ಕೂಡ ಜೋರಾಗಿದೆ.

News Hour: ಭಾರತಕ್ಕೆ ವೈರಸ್.. ಎಲ್ಲೆಡೆ ಅಲರ್ಟ್​!

 

ರಾಷ್ಟ್ರ ರಾಜಕಾರಣದ ವಿಚಾರಕ್ಕೆ ಬರೋದಾದರೆ, ದೆಹಲಿ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಿಗದಿಯಾಗಿದೆ. ಫೆಬ್ರವರಿ 5ಕ್ಕೆ ಮತದಾನ ನಡೆಯಲಿದ್ದು, ಫೆಬ್ರವರಿ 8ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇವಿಎಂ ಬಗ್ಗೆ ಕ್ಯಾತೆ ತೆಗೆದವರಿಗೆ ಚುನಾವಣಾ ಆಯೋಗ ಚಾಟಿ ಬೀಸಿದೆ.