Caste census: ಜಾತಿಗಣತಿ ವರದಿ ತಿರಸ್ಕರಿಸಿ ಯಾವ್ಯಾವ ಸಚಿವರ ಸಹಿ ? ವರದಿ ಸ್ವೀಕರಿಸಿ ಸಹಿ ಹಾಕಿದ ಸಚಿವರು ಯಾರು ?

Caste census: ಜಾತಿಗಣತಿ ವರದಿ ತಿರಸ್ಕರಿಸಿ ಯಾವ್ಯಾವ ಸಚಿವರ ಸಹಿ ? ವರದಿ ಸ್ವೀಕರಿಸಿ ಸಹಿ ಹಾಕಿದ ಸಚಿವರು ಯಾರು ?

Published : Jan 30, 2024, 01:26 PM ISTUpdated : Jan 30, 2024, 01:27 PM IST

ಕಾಂಗ್ರೆಸ್‌ನೊಳಗೆ ಭುಗಿಲೆದ್ದ ಜಾತಿ ಗಣತಿ ವರದಿ ಸಂಘರ್ಷ
ಸಿದ್ದರಾಮಯ್ಯ ಸಂಪುಟದಲ್ಲೇ ವರದಿ ಪರ-ವಿರೋಧ ಗುದ್ದಾಟ
ಜಾತಿ ಗಣತಿ ವಿಚಾರದಲ್ಲಿ ಸಿದ್ದರಾಮಯ್ಯ ಸಂಪುಟವೇ ಇಬ್ಭಾಗ

ಕಾಂಗ್ರೆಸ್‌ನೊಳಗೆ ಮತ್ತೆ ಜಾತಿ ಗಣತಿ ವರದಿ ಸಂಘರ್ಷ ಭುಗಿಲೆದ್ದಿದೆ. ಜಾತಿ ಗಣತಿ (Caste census) ವಿಚಾರದಲ್ಲಿ ಸಿದ್ದರಾಮಯ್ಯ (Siddaramaiah) ಸಂಪುಟವೇ ಇಬ್ಭಾಗವಾಗಿದೆ. ಈಗಾಗಲೇ ವರದಿ ವಿರುದ್ಧವಾಗಿ ಲಿಂಗಾಯತ, ಒಕ್ಕಲಿಗ ಸಚಿವರು ಸಹಿ ಸಂಗ್ರಹಿಸಿದ್ದಾರೆ. ಇದೀಗ ಶೋಷಿತ ಸಮುದಾಯ ಸಮಾವೇಶದಲ್ಲಿ ವರದಿ ಸ್ವೀಕಾರದ ಘೋಷಣೆ  ಬೆನ್ನಲ್ಲೇ  ಕಾಂತರಾಜ್ ವರದಿ ಜಾರಿಗಾಗಿ ಸಾಲು ಸಾಲು ಸಚಿವರ ಸಹಿ ಹಾಕಿದ್ದಾರೆ. ದಲಿತ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಸಚಿವರರು ವರದಿ ಪರ ಸಹಿ ಹಾಕಿದ್ದಾರೆ. ಕಾಂತರಾಜ್ ವರದಿ(Kantraj report) ಬಗ್ಗೆ ಸಚಿವ ಸಂಪುಟದೊಳಗೆ ಭಿನ್ನಾಭಿಪ್ರಾಯ ಇದ್ದು, ಗೊಂದಲದ ಮಧ್ಯೆ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮತ್ತೆ 15 ದಿನ ಜಯಪ್ರಕಾಶ್ ಹೆಗ್ಡೆ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಕಳೆದ ಬಾರಿ ಜನವರಿ 31ರವರೆಗೆ ಅವಧಿ ವಿಸ್ತರಣೆಯನ್ನು ಸರ್ಕಾರ ಮಾಡಿತ್ತು. ಮತ್ತೆ ಫೆ‌ಬ್ರವರಿ 15ರವರೆಗೂ ಅಧ್ಯಕ್ಷರ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಲೋಕಸಭೆ ಹೊಸ್ತಿಲಲ್ಲಿ ಕಾಂಗ್ರೆಸ್‌ನಲ್ಲೇ(Congress) ಜಾತಿಗಣತಿ ವರದಿ ತಿಕ್ಕಾಟ ಜೋರಾಗಿದೆ.

ಇದನ್ನೂ ವೀಕ್ಷಿಸಿ:  Mandya: ಹನುಮ ಧ್ವಜ ವಿವಾದ ಪ್ರಕರಣ: ಯಾರದ್ದು ಸರಿ? ಯಾರದ್ದು ತಪ್ಪು? ಜೋರಾಗಿದೆ ಚರ್ಚೆ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more