News Hour:  ರಾಜ್ಯದ ಕಟಕಟೆಯಲ್ಲಿ ಮುಂದುವರಿದ ಹಿಜಾಬ್ ವಾದ-ವಿವಾದ!

News Hour: ರಾಜ್ಯದ ಕಟಕಟೆಯಲ್ಲಿ ಮುಂದುವರಿದ ಹಿಜಾಬ್ ವಾದ-ವಿವಾದ!

Published : Feb 18, 2022, 12:00 AM IST

ರಾಜ್ಯದಲ್ಲಿ ಮುಂದುವರಿದ ಹಿಜಾಬ್ ಗಲಾಟೆ
ಹೈಕೋರ್ಟ್ ನಲ್ಲಿ ಪ್ರಕರಣದ ಕುರಿತಾಗಿ ಮುಂದುವರಿದ ವಿಚಾರಣೆ
ಶಿಕ್ಷಣಕ್ಕಿಂತ ನಮಗೆ ಹಿಜಾಬ್ ಮುಖ್ಯ ಅಂದ್ರು ಹೆಣ್ಮಕ್ಕಳು

ಬೆಂಗಳೂರು (ಫೆ.17):  ರಾಜ್ಯದಲ್ಲಿ ಹಿಜಾಬ್ (Hijab)  ಸಮರ ಇನ್ನೂ ಮುಗಿದಿಲ್ಲ. ಹೈಕೋರ್ಟ್ (High Court)  ಕಟಕಟೆಯಲ್ಲಿ ಈಗಾಗಲೇ ಹಿಜಾಬ್ ಕುರಿತಾಗಿ ವಾದ ಪ್ರತಿವಾದಗಳು ನಡೆಯುತ್ತಿದ್ದು, ಗುರುವಾರ ಕೂಡ ಈ ಕುರಿತಾಗಿ ವಿಶೇಷವಾದ ವಾದ ಮಂಡನೆಗಳು ಆಗಿವೆ. ಈ ನಡುವೆ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಧಿಕ್ಕರಿಸಿರುವ ಮುಸ್ಲಿಂ ಬಾಲಕಿಯರು ಶಾಲೆಗೆ ಹಿಜಾಬ್ ಧರಿಸಿಕೊಂಡು ಹೋಗಿದ್ದು, ಅವರಿಗೆ ಪ್ರವೇಶ ನೀಡಲಾಗಿಲ್ಲ. ಚಿತ್ರದುರ್ಗದ ಪಿಯು ಕಾಲೇಜಿನಲ್ಲಿ ಇದರ ವಿರುದ್ಧ ಮುಸ್ಲಿಂ ಹುಡುಗಿಯರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಇನ್ನೊಂದೆಡೆ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಈಶ್ವರಪ್ಪ ಅವರ ಹೇಳಿಕೆಗೆ ಕಾಂಗ್ರೆಸ್ ನ ಪ್ರತಿಭಟನೆ ಮುಂದುವರಿದಿದೆ. ಉಭಯ ಸದನಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದೆ. ಇನ್ನೊಂದೆಡೆ ಈಶ್ವರಪ್ಪ (K S Eshwarappa ) ಅವರು ಎಷ್ಟೇ ಪ್ರತಿಭಟನೆ ಮಾಡಲಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯತ್ನಿಸಿದ್ದಾರೆ. 

Karnataka Politics ಈಶ್ವರಪ್ಪರನ್ನ ಸಚಿವ ಸಂಪುಟದಿಂದ ಕೈಬಿಡುವಂತೆ ಪಟ್ಟು
ಕೊರೋನಾ ಕಾರಣದಿಂದಾಗಿ ನಿಂತಿದ್ದ ಮೇಕೆದಾಟು ಪಾದಯಾತ್ರೆಗೆ ಮತ್ತೆ ಚಾಲನೆ ನೀಡಲು ಕಾಂಗ್ರೆಸ್ ಮುಂದಾಗಿದೆ. ಫೆ. 27 ರಿಂದ ಮತ್ತೆ ಮೇಕೆದಾಟು ಪಾದಯಾತ್ರೆ ಆರಂಭವಾಗುವ ಸಾಧ್ಯತೆ ಇದ್ದು, ಇದಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more