Mar 24, 2022, 10:53 AM IST
ಶಿವಮೊಗ್ಗ (ಮಾ. 24): ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ (Muslim Traders) ಅವಕಾಶ ನಿರಾಕರಣೆ ಮುಂದುವರೆದಿದೆ. ಕರಾವಳಿಯಲ್ಲಿ ಶುರುವಾದ ಈ ನಿರ್ಬಂಧ, ಈಗ ಶಿವಮೊಗ್ಗಕ್ಕೂ (Shivamogga) ಹಬ್ಬಿದೆ. ಶಿವಮೊಗ್ಗ ಮಾರಿಕಾಂಬಾ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರನ್ನು ನಿರ್ಬಂಧಿಸಲಾಗಿದೆ. ಇಡೀ ಜಾತ್ರೆಯ ಸ್ಟಾಲ್‌ಗಳ ಟೆಂಡರ್ ಪಡೆದಿದ್ದಾರೆ ಭಜರಂಗದಳ ಯುವಕರು.
Muslim Traders Ban:ಬಪ್ಪನಾಡು ಕೊನೆ ದಿನದ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ
ಈ ಮೊದಲು ಚಿನ್ನಪ್ಪ ಎಂಬುವವರು ಸ್ಟಾಲ್ ಟೆಂಡರ್ ಪಡೆದಿದ್ದರು. ಮುಸ್ಲಿಮರ ಸ್ಟಾಲ್‌ಗೆ ಅವಕಾಶ ಕೊಡಲು ಚಿನ್ನಪ್ಪ ಸಿದ್ಧರಾಗಿದ್ರು. ಚಿನ್ನಪ್ಪ ಅವರ ನಿರ್ಧಾರ ವಿರೋಧಿಸಿದ ಭಜರಂಗದಳ ಕಾರ್ಯಕರ್ತರು, ಜಾತ್ರಾ ಸಮಿತಿ ಜೊತೆ ಚರ್ಚಿಸಿ ಟೆಂಡರ್ ಪಡೆದಿದ್ದಾರೆ. ಇನ್ನೂ 4 ದಿನ ಮಾರಿಕಾಂಬಾ ಜಾತ್ರೆ ನಡೆಯಲಿದೆ.