ಹತ್ತು ವರ್ಷದ ನಂತರ ಮಂಗಳೂರಿನ ಪಂಪ್‌ವೆಲ್ ಫ್ಲೈಓವರ್‌ಗೆ ಉದ್ಘಾಟನಾ ಭಾಗ್ಯ ಸಿಕ್ಕಿದೆ. ಸಂಸದ ನಳೀನ್ ಕುಮಾರ್ ಕಟೀಲು ಫ್ಲೈಓವರನ್ನು ಉದ್ಘಾಟಿಸಿದ್ದಾರೆ. ಕೇರಳದ ಚೆಂಡೆ, ಕೀಲು, ಕುದುರೆ ತಂಡಗಳ ಮೆರವಣಿಗೆ ಉದ್ಘಾಟನೆಗೆ ಇನ್ನಷ್ಟು ಮೆರಗು ತಂದಿತ್ತು.
ಮಂಗಳೂರು (ಜ. 31): ಹತ್ತು ವರ್ಷದ ನಂತರ ಮಂಗಳೂರಿನ ಪಂಪ್‌ವೆಲ್ ಫ್ಲೈಓವರ್‌ಗೆ ಉದ್ಘಾಟನಾ ಭಾಗ್ಯ ಸಿಕ್ಕಿದೆ. ಸಂಸದ ನಳೀನ್ ಕುಮಾರ್ ಕಟೀಲು ಫ್ಲೈಓವರನ್ನು ಉದ್ಘಾಟಿಸಿದ್ದಾರೆ. ಕೇರಳದ ಚೆಂಡೆ, ಕೀಲು, ಕುದುರೆ ತಂಡಗಳ ಮೆರವಣಿಗೆ ಉದ್ಘಾಟನೆಗೆ ಇನ್ನಷ್ಟು ಮೆರಗು ತಂದಿತ್ತು.
2010 ರಲ್ಲೇ ಶುರುವಾದ ಕಾಮಗಾರಿ ಇದು. 10 ವರ್ಷವಾದರೂ ಇದು ಮುಗಿದಿರಲಿಲ್ಲ. ಇದಕ್ಕಾಗಿ ಪಂಪ್‌ವೆಲ್ ಫ್ಲೈಓವರ್ ಟ್ರೋಲ್ ಆಗಿತ್ತು. ಕೊನೆಗೂ ಉದ್ಘಾಟನಾ ಭಾಗ್ಯ ಸಿಕ್ಕಿದೆ.