Mar 1, 2022, 10:09 AM IST
ಬೆಂಗಳೂರು (ಮಾ. 01): ಕೆಲವೊಮ್ಮೆ ಅಚಾತುರ್ಯಗಳು ಹೇಗೆ ಸಂಭವಿಸುತ್ತದೆ ನೋಡಿ. ಟೂತ್‌ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಲ್ಲಿ (Rat Poison) ಹಲ್ಲುಜ್ಜಿ, ಯುವತಿಯೋರ್ವಳು ಮೃತಪಟ್ಟಿದ್ದಾಳೆ. ಸುಳ್ಯದ (Sullia) ಶ್ರಾವ್ಯ ಎಂಬಾಕೆ ಮೃತ ದುರ್ದೈವಿ. ಟೂತ್‌ಪೇಸ್ಟ್ ಪಕ್ಕದಲ್ಲಿ ಇಲಿ ಪಾಷಾಣ ಇಟ್ಟಿದ್ದರು. ಕತ್ತಲಲ್ಲಿ ಗೊತ್ತಾಗದೇ ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ್ದಾಳೆ. ಕೂಡಲೇ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.