ಇದು ಮಾಜಿ ಸಿಎಂ ಸ್ವಕ್ಷೇತ್ರದ ಕಥೆ: ನಾಯಕರೇ ವೋಟು ಕೇಳ್ತೀರಾ..ಕೆಲಸ ಮಾಡಲ್ವಾ ?

ಇದು ಮಾಜಿ ಸಿಎಂ ಸ್ವಕ್ಷೇತ್ರದ ಕಥೆ: ನಾಯಕರೇ ವೋಟು ಕೇಳ್ತೀರಾ..ಕೆಲಸ ಮಾಡಲ್ವಾ ?

Published : Aug 18, 2023, 01:29 PM ISTUpdated : Aug 18, 2023, 01:30 PM IST

ನಾವು ಈಗ ಹೇಳಲು ಹೊರಟಿರುವ ಸ್ಟೋರಿ ಇದು ಮಾಜಿ ಸಿಎಂ ಕ್ಷೇತ್ರದ ಕಥೆ. ಇದನ್ನ ನೋಡಿ ದ್ರೆ ಅಯ್ಯೋ ಪಾಪ ಅಂತೀರಿ. ಆ ದೃಶ್ಯ  ನೋಡಿದ್ರೆ ಏನಪ್ಪ ಇವರ ಪಾಡು ಹಿಂಗಿದೆಯಲ್ಲ ಅಂತ ಅನ್ಕೋತಿರಾ.? ಅಷ್ಟಕ್ಕೂ, ಆ ಮಾಜಿ ಸಿಎಂ ಕ್ಷೇತ್ರದಲ್ಲಿ ಆಗ್ತಿರೋದು ಏನು ಗೊತ್ತಾ..? ಈ ಸ್ಪೆಷಲ್ ರಿಪೋಟರ್ ನೋಡಿ.
 

ಇದೀಗ ನಾವು ಹೇಳ ಹೊರಟಿರೋದು ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರ ಚನ್ನಪಟ್ಟಣದ ಕಥೆ ಇದು. ಕುಮಾರಸ್ವಾಮಿಯವರು(HD Kumaraswamy) ವಿಪಕ್ಷಗಳ ವಿರುದ್ಧ ಗುದ್ದಾಡೋದ್ರಲ್ಲಿ ನಿಸ್ಸೀಮರು, ಆದ್ರೆ, ತಮ್ಮ ಕ್ಷೇತ್ರದಲ್ಲಿ ಈ ರೀತಿ ಜನ ಸಮಸ್ಯೆ ಎದುರಿಸ್ತಾ ಇದ್ರು ಯಾರ ಗಮನಕ್ಕೂ ಬಂದಿಲ್ಲ. ಪ್ರತಿ ಮನೆಯ ಮುಂದೆ ಕಿರು ಚರಂಡಿ ಗುಂಡಿಗಳು, ಬೆಳಗಾದರೆ ಸಾಕು ಕೊಳಚೆ ನೀರನ್ನು ಗೋರುವ ಕಾಯಕ, ಅಷ್ಟಕ್ಕೂ ಇಂತಹ ದೃಶ್ಯಗಳು ಕಂಡು ಬಂದಿರೋದು ಯಾವುದೋ ಕುಗ್ರಾಮದಲ್ಲಿ ಅಲ್ಲ, ಅಸಲಿಗೆ ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿ ಆಗಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ(channapattana). ಆನಂದಪುರದ 1ನೇ ಅಡ್ಡರಸ್ತೆಯ ನಿವಾಸಿಗಳ ಸ್ಥಿತಿ ಇದು.ಇಲ್ಲಿನ ನಿವಾಸಿಗಳ ಬದುಕೇ ಚರಂಡಿ ಗುಂಡಿಯಾಗಿ ಬಿಟ್ಟಿದೆ. ಚನ್ನಪಟ್ಟಣ ನಗರಸಭಾ ವ್ಯಾಪ್ತಿಯ 29ನೇ ವಾರ್ಡ್‌ಗೆ ಸೇರುವ ಆನಂದಪುರ 1ನೇ ಅಡ್ಡರಸ್ತೆಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ನಿವಾಸಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಮರೀಚಿಕೆ ಯಾಗಿವೆ. ರಸ್ತೆಯಿಲ್ಲ, ಒಳಚರಂಡಿ ವ್ಯವಸ್ಥೆ ಬಗ್ಗೆ ಕೇಳಲೇ ಬೇಡಿ, ಮನೆ ಮುಂದೆ ಗುಂಡಿ ನಿರ್ಮಿಸಿಕೊಂಡು ಬರಿಗೈಯಲ್ಲಿ ಮೋರಿ ನೀರನ್ನ ಬಾಚಿ ಹೊರಹಾಕುವ ಪರಿಸ್ಥಿತಿ ಯಾರಿಗೂ ಬೇಡ ಸ್ವಾಮಿ.ಬರೀ ಕೊಳಚೆ ನೀರು ಗೋರುವುದಲ್ಲದೇ ಅದನ್ನು ಬಕೆಟ್ಟುಗಳಲ್ಲಿ ತುಂಬಿಕೊಂಡು ಮುಖ್ಯರಸ್ತೆಯ ಚರಂಡಿಯಲ್ಲಿ ಸುರಿಯುವುದೇ ದಿನನಿತ್ಯದ ಕಾಯಕವಾಗಿದೆ.

ಇದನ್ನೂ ವೀಕ್ಷಿಸಿ:  ಹೊರ ಬಿತ್ತು ಮತ್ತೊಂದು ಸಮೀಕ್ಷೆ..ಮೋದಿಗೆ ಮತ್ತೆ ರಾಜ ಸಿಂಹಾಸನ..!

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!