Mar 4, 2024, 10:10 AM IST
ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯ ನಿಜವಾಯ್ತಾ ಎಂಬ ಅನುಮಾನ ಈಗ ಕಾಡತೊಡಗಿದೆ. ಅವರು ಈ ಹಿಂದೆ ಬಾಂಬ್ ಬ್ಲಾಸ್ಟ್(Bomb Blast) ಆಗೋ ಲಕ್ಷಣವೂ ಇದೆ. ಬೆಂಕಿ ಹಾವಳಿ, ನೀರಿನ ಹಾವಳಿ ಜಾಸ್ತಿ ಆಗಲಿದೆ ಎಂದು ಭವಿಷ್ಯ ನುಡಿದ್ದರು. ಇವರು ಹೀಗೆ ಹೇಳಿದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ(Bengaluru) ಬಾಂಬ್ ಸ್ಫೋಟವಾಗಿದೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಯುದ್ಧ ಆಗ್ತದೆ, ಸಾವು-ನೋವು ಆಗುತ್ತಂತೆ. ಮಹಾನ್ ನಾಯಕರ ಸಾವು ಕೂಡ ಆಗಲಿದ್ದು, ದೊಡ್ಡ ದೊಡ್ಡ ನಗರಗಳಲ್ಲಿ ಭೂಕಂಪ, ಜಗತ್ತಿನ ಪ್ರಧಾನಿಗಳ ಕೊನೆಯಾಗ್ತದೆ. ಧಾರ್ಮಿಕ ಮುಖಂಡನ ಸಾವು ಆಗ್ತದೆ ಎಂದು ಕೋಡಿಶ್ರೀ(Kodishree) ಭವಿಷ್ಯ ನುಡಿದಿದ್ದಾರೆ.
ಇದನ್ನೂ ವೀಕ್ಷಿಸಿ: Bomb Blast: 10 ವರ್ಷಗಳ ನಂತರ ಬಾಂಬ್ ಸ್ಫೋಟ: ಸಿಲಿಕಾನ್ ಸಿಟಿಯಲ್ಲಿ ಇಲ್ಲಿತನಕ ನಡೆದಿರುವ ಟೆರರಿಸ್ಟ್ ಅಟ್ಯಾಕ್‌ಗಳೆಷ್ಟು ?