ರಾಷ್ಟ್ರಧ್ವಜ ನೇಕಾರರಿಗೆ ಇದೆಂಥಾ ದುಸ್ಥಿತಿ..? ನೇಕಾರ ಕೇಂದ್ರದಲ್ಲಿ ಹಾವು-ಚೇಳುಗಳದ್ದೇ ಸಾಮ್ರಾಜ್ಯ !

ರಾಷ್ಟ್ರಧ್ವಜ ನೇಕಾರರಿಗೆ ಇದೆಂಥಾ ದುಸ್ಥಿತಿ..? ನೇಕಾರ ಕೇಂದ್ರದಲ್ಲಿ ಹಾವು-ಚೇಳುಗಳದ್ದೇ ಸಾಮ್ರಾಜ್ಯ !

Published : Aug 14, 2023, 10:26 AM IST

ಅವರೆಲ್ಲಾ ಕಳೆದ ಹತ್ತಾರು ವರ್ಷಗಳಿಂದ ಇಡೀ ದೇಶವೇ ಹೆಮ್ಮೆ ಪಡುವಂಥ ರಾಷ್ಟ್ರಧ್ವಜದ ಬಟ್ಟೆಯನ್ನ ನೇಯುವ ಕೆಲ್ಸ ಮಾಡ್ತಿದ್ದಾರೆ. ವೇತನ ಕಡಿಮೆ ಇದ್ರೂ ಅವ್ರಲ್ಲಿರೋ ಅಭಿಮಾನದಿಂದ ರಾಷ್ಟ್ರಧ್ವಜಕ್ಕೆ ಬಟ್ಟೆ ನೇಯುತ್ತಾ ಜೀವನ ಕಳಿತಿದ್ದಾರೆ. ಇಷ್ಟಾದ್ರೂ ಯಾರೂ ಅವರ ಕಡೆ ಗಮನ ಕೊಡ್ತಿಲ್ಲ. ಸಾಲದ್ದಕ್ಕೆ ನೇಯ್ಗೆ ಕೇಂದ್ರದಲ್ಲಿ ಹಾವು ಚೇಳುಗಳ ಭರಾಟೆ ಜೋರಾಗಿದೆ. 

ರಾಷ್ಟ್ರಧ್ವಜ ಹಿಡಿದು ಅಭಿಮಾನ ಪಡ್ತಿರೋ ಮಹಿಳೆಯರು ನಮ್ಮ ದೇಶದ ಹೆಮ್ಮೆಯ ನೇಕಾರ (Nekara) ಕುಟುಂಬದವರು. ಇವರಿಗೆ ಕೈ ತುಂಬ ಸಂಬಳವೂ ಇಲ್ಲ. ಸವಲತ್ತು ಗಳೂ ಇಲ್ಲ. ಆದ್ರೂ ದೇಶಾಭಿಮಾನದಿಂದ ರಾಷ್ಟ್ರಧ್ವಜ (National Flag) ನೇಯ್ದು ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಆದ್ರೆ ಇವರಿಗೆ ಮತ್ತೊಂದು ಹಾವು-ಚೇಳುಗಳ ಕಾಟ ಜೋರಾಗಿದೆ. ಬಾಗಲಕೋಟೆ(Bagalkot) ಜಿಲ್ಲೆಯಲ್ಲಿರೋ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಪ್ರತಿನಿತ್ಯವೂ ರಾಷ್ಟ್ರಧ್ವಜದ ಬಟ್ಟೆಯನ್ನು ನೇಯುವ ಕೆಲ್ಸ ನಡೆಯುತ್ತೇ. ಅಂದಾಜು 50ಕ್ಕೂ ಅಧಿಕ ಜನರು ಇಲ್ಲಿ ನಿತ್ಯ ನೇಕಾರಿಕೆ ಮಾಡ್ತಾರೆ. ಕನಿಷ್ಟ ಕೂಲಿ ಸಹ ಇವರಿಗೆ ಸಿಕ್ತಿಲ್ಲ. ಹಲವು ಬಾರಿ ಕೇಳಿಕೊಂಡರೂ ಅನುದಾನವೂ ಹೆಚ್ಚುತ್ತಿಲ್ಲ, ಯಾರೊಬ್ಬರೂ ಸಹ ಇವರ ಗೋಳು ಕೇಳುತ್ತಿಲ್ಲ. ಇವುಗಳ ಮಧ್ಯೆಯೇ ಬಟ್ಟೆ ನೇಯೋಕೆ ಕೇಂದ್ರಕ್ಕೆ ಬಂದ್ರೆ ಈಗ ಹಾವು, ಚೇಳಿನ ಭಯ ಅತಿಯಾಗಿದೆ. ಕೇಂದ್ರದ ಸುತ್ತಲೂ ಮುಳ್ಳುಕಂಠಿಗಳಿದ್ದು, ಹಾವು ಚೇಳಿನ ಉಪಟಳ ಹೆಚ್ಚಿದೆ. ಜೀವ ಕೈಯಲ್ಲಿಡಿದು ಕೆಲಸ ಮಾಡುವಂತಾಗಿದೆ. ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ(Khadhi Gramodyoga Khendra) ಕೂಲಿ ಕಡಿಮೆ ಇರೋದ್ರಿಂದ ದಿನದಿಂದ ದಿನಕ್ಕೆ ನೇಕಾರರ ಸಂಖ್ಯೆ ಇಳಿಮುಖವಾಗ್ತಿದೆ. ಈ ಹಿಂದೆ 200 ಜನರಿಂದ ನೇಕಾರಿಕೆ ಕೇಂದ್ರದಲ್ಲಿ ಈಗ ಕೇವಲ 50 ಜನ ಕೆಲಸ ಮಾಡ್ತಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆಯೂ ಇದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡ ನೇಕಾರರು, ಹೊಸ ಯಂತ್ರಗಳ ಜತೆ ನಮಗೆ ಪೆನ್ಷನ್ ನೀಡಿ ಅಂತಿದ್ದಾರೆ.  

ಇದನ್ನೂ ವೀಕ್ಷಿಸಿ:  ರಾಜಧಾನಿಯಲ್ಲಿ ರೌಡಿಸಂ ಹುಟ್ಟಡಗಿಸಲು ಖಾಕಿ ಸಜ್ಜು: ಪುಡಿ ರೌಡಿಗಳ ಮಟ್ಟಹಾಕುವಂತೆ ಕಮಿಷನರ್ ವಾರ್ನ್ !

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more