Aug 14, 2024, 11:34 PM IST
ಬೆಂಗಳೂರು (ಆ.14): ಕಳೆದ ವರ್ಷ ಚುನಾವಣೆಗೂ ಪೂರ್ವ ಭಾಷಣದಲ್ಲಿ ಕಾಂಗ್ರೆಸ್ ನಾಯಕರು ಮನೆಯ ಗಲ್ಲಿ ಗಲ್ಲಿಗಳಿಗೆ ಗ್ಯಾರಂಟಿ ಸ್ಕೀಮ್‌ನ ಕರಪತ್ರಗಳು ಹಂಚಿ ಬಂದಿದ್ದರು. ಇನ್ನೊಂದೆಡೆ ಸ್ವತಃ ಸಿಎಂ ವೇದಿಕೆ ಮೇಲೆ ನಿಂತು, ಕಾಕಾಪಾಟೀಲ್‌ಗೂ ಫ್ರೀ, ಮಹದೇವಪ್ಪ ನಿಂಗೂ ಫ್ರೀ ಎಂದು ಹೇಳಿದ ಮಾತು ಗ್ಯಾರಂಟಿ ಪ್ರಚಾರದಲ್ಲಿ ವೈರಲ್ ಆಗಿದ್ದವು.
ಆದರೆ, ಈಗ ಗ್ಯಾರಂಟಿ ಸ್ಕೀಮ್‌ಗೆ ಎಕ್ಸ್‌ಪೈರಿ ಸಮಯ ಹತ್ತಿರ ಬಂದಿದೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳನ್ನ ಪರಿಷ್ಕರಣೆ ಮಾಡುವಂತೆ ಸಚಿವರೇ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಅದಕ್ಕೆ ಕಾರಣ, ಯಾವುದೇ ಕೆಲಸಕ್ಕೂ ಅನುದಾನ ಇಲ್ಲದೆ ಇರುವುದು.
ಕಾಂಗ್ರೆಸ್ ಗ್ಯಾರಂಟಿಗೆ ಎಕ್ಸ್ ಪೈರಿ.? ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಕಾಂಗ್ರೆಸ್ ಕತ್ತರಿ..! JDS-BJP ಟೀಕೆ
ಅನ್ನಭಾಗ್ಯ, ಗೃಹ ಲಕ್ಷ್ಮಿಯೋಜನೆ ಪರಿಷ್ಕರಣೆ ಚಿಂತನೆ ನಡೆದಿದೆ. ಎಪಿಎಲ್, ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ನಿರ್ಧಾರ. ಬಿಪಿಎಲ್ ಕಾರ್ಡ್ದಾರಿಗೆ ಪೂರ್ತಿ ಸಬ್ಸಿಡಿ ಸಿಗುತ್ತಿದೆ. ಎಪಿಎಲ್ ಕಾರ್ಡ್ದಾರರಿಗೆ ಅರ್ಧ ಸಬ್ಸಿಡಿ ಸಿಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.