ಏಷ್ಯಾನೆಟ್‌ ಸಮೂಹದಿಂದ ಅಮೃತ ಮಹೋತ್ಸವ ಯಾತ್ರೆ: ರಾಜ್ಯಪಾಲರಿಂದ ಚಾಲನೆ

Jul 20, 2022, 7:56 PM IST

ಬೆಂಗಳೂರು (ಜುಲೈ 20): ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಏಷ್ಯಾನೆಟ್‌ ಸಮೂಹ ಆಯೋಜಿಸಿರುವ ಅಮೃತ ಮಹೋತ್ಸವ ಯಾತ್ರೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೊಟ್‌ ಚಾಲನೆ ನೀಡಿದರು. ಈ ವೇಳೆ ಏಷ್ಯಾನೆಟ್‌ ಗ್ರೂಪ್‌ ಚೇರ್ಮನ್‌ ರಾಜೇಶ್‌ ಕಲ್ರಾ,  ಕನ್ನಡಪ್ರಭ-ಸುವರ್ಣ ನ್ಯೂಸ್ ಚೀಫ್‌ ಮೆಂಟರ್‌ ರವಿ ಹೆಗಡೆ, ಕರ್ನಾಟಕ-ಗೋವಾ ಎನ್‌ಸಿಸಿ ಗ್ರೂಪ್‌ ಕಮಾಂಡರ್‌ ಬಸಂತ್‌ ಸಿಂಗ್‌ ಸೇರಿದಂತೆ ಸಾಕಷ್ಟು ಗಣ್ಯರು ಉಪಸ್ಥಿತರಿದ್ದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು, "ದೇಶದ ಸದೃಢತೆ, ಏಕತೆಗೆ ಈ ಯಾತ್ರೆ ಬಹಳ ಪ್ರಮುಖ ಎಂದರು. ಕೇರಳದಿಂದ ಆರಂಭವಾದ ಈ ಯಾತ್ರೆಯ ಮಹತ್ವವನ್ನು ರಾಜೇಶ್‌ ಕಾಲ್ರಾ ಈ ವೇಳೆ ವಿವರಿಸಿದರು. ಕರ್ನಾಟಕ ಅದ್ಭುತಗಳಿರುವ ರಾಜ್ಯ. ಈ ಯಾತ್ರೆ ಅದ್ಬುತಗಳನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಲಿದೆ. ಈ ರಾಜ್ಯದ ಅದ್ಭುತಗಳೇ ಜಗತ್ತಿನ ಅದ್ಭುತಗಳಾಗುವ ಸಾಧ್ಯತೆ ಇದೆ. ನಮ್ಮ ರಾಜ್ಯದ ಅದ್ಭುತಗಳನ್ನು ನಾವು ಅರಿಯಬೇಕಿದೆ' ಎಂದು ಹೇಳಿದರು.

ಕಲ್ಯಾಣ ಕರ್ನಾಟಕದಲ್ಲಿ ಅದ್ದೂರಿ ಅಮೃತ ಮಹೋತ್ಸವಕ್ಕೆ ಸಜ್ಜು, 1 ಲಕ್ಷ ಜನ ಸೇರಿಸಿ ಆಚರಣೆ

ಕೇರಳದಿಂದ ಆರಂಭವಾಗಿರುವ ಅಮೃತ ಮಹೋತ್ಸವ ಯಾತ್ರೆಯ ಬಸ್‌, ದೇಶದ ಹಲವು ರಾಜ್ಯಗಳಲ್ಲಿ ಸಂಚಾರ ಮಾಡಲಿದೆ. ಎನ್‌ಸಿಸಿ ಕೆಡೆಟ್‌ಗಳು ಈ ಯಾತ್ರೆಯ ಭಾಗವಾಗಿರಲಿದ್ದಾರೆ. "ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿವೆ. ಅದೇ ರೀತಿ ಏಷ್ಯಾನೆಟ್‌ ಗ್ರೂಪ್‌ ಇದನ್ನು ಆಯೋಜನೆ ಮಾಡಿದೆ' ಎಂದು ಕನ್ನಡಪ್ರಭ-ಸುವರ್ಣ ನ್ಯೂಸ್ ಚೀಫ್‌ ಮೆಂಟರ್‌ ರವಿ ಹೆಗಡೆ ಹೇಳಿದರು.