ಜಗತ್ತಿನ ಏಳು ಅದ್ಭುತಗಳು ಎಂದಾಗ ಬಹುತೇಕ ಅದನ್ನು ಅಂದಾಜು ಮಾಡುವವರಿದ್ದಾರೆ. ಆದರೆ, ಕರ್ನಾಟಕದ ಏಳು ಅದ್ಭುತಗಳು ಯಾವುದು ಎಂದಾಗ, ಯೋಚನೆ ಆರಂಭವಾಗುತ್ತದೆ. ಇದನ್ನು ಬಗೆಹರಿಸುವ ಸಲುವಾಗಿಯೇ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ರಾಜ್ಯದ 7 ಅದ್ಬುತಗಳನ್ನು ಗುರುತಿಸಲು ಕಳೆದ ಒಂದು ವರ್ಷದಿಂದ ಅಭಿಯಾನ ಆರಂಭಿಸಿತ್ತು.
ಬೆಂಗಳೂರು (ಫೆ.26): ಜಗತ್ತಿನ ಅದ್ಭುತಗಳು ಎಂದಾಗ ಖಂಡಿತವಾಗಿ ನಮ್ಮ ಕಿವಿ ನೆಟ್ಟಗಾಗುತ್ತದೆ. ಈಗ ಅದೇ ಹೆಮ್ಮೆಯನ್ನು ಕನ್ನಡಿಗರು ಅನುಭವಿಸಲಿದ್ದಾರೆ. ಯಾಕೆಂದರೆ, ಕಳೆದ ಒಂದು ವರ್ಷದಿಂದ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ರಾಜ್ಯದ 7 ಅದ್ಭುತಗಳನ್ನು ಗುರುತಿಸುಬ ಪ್ರಕ್ರಿಯೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ.
ರಾಜ್ಯಾದ್ಯಂತ ವಿವಿಧ ವರ್ಗದವರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾದ ರಾಜ್ಯದ 7 ಅದ್ಭುತಗಳನ್ನು ಗುರುತಿಸುವ ಅಭಿಯಾನ ಅಂತ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕರ್ನಾಟಕದ 7 ಅದ್ಭುತಗಳ ಪಟ್ಟಿ ಘೋಷಣೆ ಮಾಡಿದ್ದಾರೆ.
ಕರ್ನಾಟಕದ 7 ಅದ್ಭುತಗಳ ಅಧಿಕೃತ ಪಟ್ಟಿ ಬಿಡುಗಡೆ, ಇಲ್ಲಿದೆ ಸಪ್ತ ತಾಣಗಳ ಸುಂದರ ಲೋಕ!
ರಾಜ್ಯದ ಜನರು ಮತಗಳ ಮೂಲಕ ತಮ್ಮ ತಮ್ಮ ಊರಿನ ಅದ್ಭುತಗಳಿಗೆ ಮತ ಚಲಾಯಿಸಿದ್ದರು. ಲಕ್ಷ ಲಕ್ಷ ಮತಗಳು ಒಂದೊಂದು ತಾಣಕ್ಕೆ ಸಿಕ್ಕಿದೆ. ಈ ಕರ್ನಾಟಕದ 7 ಅದ್ಭುತಗಳನ್ನು ಬೊಮ್ಮಾಯಿ ಘೋಷಣೆ ಮಾಡಿದರು.