42 ಕೋಟಿಯ ಹಿಂದೆ ಪ್ರಭಾವಿ ರಾಜಕಾರಣಿ..ಯಾರದು ಕೋಟಿ ಕುಬೇರ..? ಯಾರಿಗೆ ಕಾದಿದೆ ಫಜೀತಿ..?

42 ಕೋಟಿಯ ಹಿಂದೆ ಪ್ರಭಾವಿ ರಾಜಕಾರಣಿ..ಯಾರದು ಕೋಟಿ ಕುಬೇರ..? ಯಾರಿಗೆ ಕಾದಿದೆ ಫಜೀತಿ..?

Published : Oct 14, 2023, 11:56 AM IST

ಮಂಚದ ಕೆಳಗೆ 22 ಬಾಕ್ಸ್..ಐಟಿ ದಾಳಿ ವೇಳೆ ಸಿಕ್ದಿದ್ದು 42 ಕೋಟಿ..!
ಪಂಚರಾಜ್ಯ ಚುನಾವಣೆಗೆ ರಾಜ್ಯದಿಂದ ಹೋಗ್ತಿದ್ಯಾ ಕಂತೆ ದುಡ್ಡು..?
42 ಕೋಟಿಯ ಹಿಂದೆ ಪ್ರಭಾವಿ ರಾಜಕಾರಣಿ..ಯಾರದು ಕುಬೇರ..?

ಮಲಗೋ ಮಂಚದ ಕೆಳಗೆ ಕಂತೆ ಕಂತೆ ದುಡ್ಡಿನ ರಾಶಿ. ಮಂಚದ ಕೆಳಗೆ 22 ಬಾಕ್ಸ್.. ಆ 22 ಬಾಕ್ಸ್‌ಗಳಲ್ಲಿ ಐನೂರರ ಗರಿ ಗರಿ ನೋಟುಗಳು. ಎಣಿಸಿದ್ರೆ ಬರೋಬ್ಬರಿ 42 ಕೋಟಿ ರೂಪಾಯಿ. ಇದು ವಸೂಲಿ ದುಡ್ಡು ಅಂತ ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ ಆರೋಪಿಸ್ತಾ ಇದ್ದಾರೆ. ಇದು ಸಿಕ್ಕಿರೋದು ಅಂಬಿಕಾಪತಿ ಅನ್ನೋ ಗುತ್ತಿಗೆದಾರ ಕಮ್ ಬಿಲ್ಡರ್ ಮನೆಯಲ್ಲಿ. ಬೆಂಗಳೂರಿನಲ್ಲಿ(Bengaluru ) ಗುರುವಾರ ಮತ್ತು ಶುಕ್ರವಾರ ಐಟಿ ದಾಳಿ ನಡೆಸಿದ್ದು, ಈ ವೇಳೆ ಕೋಟಿ ಕುಬೇರನ ಕೋಟೆಯೊಳಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಬೆಂಗಳೂರಿನ ಕಾವಲ್‌ಭೈರಸಂಧ್ರದ ಗಣೇಶ ಬ್ಲಾಕ್‌ನಲ್ಲಿರುವ ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ(Income Tax Department) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂಬಿಕಾಪತಿ ಮಗನ ಮನೆ, ಆರ್.ಟಿ ನಗರದ ವೈಟ್ ಹೌಸ್'ನಲ್ಲಿರುವ ಮನೆ,  ಮಾನ್ಯತಾ ಟೆಕ್ ಪಾರ್ಕ್ ಬಳಿ ಇರೋ ಮಗಳ ಮನೆ.. ಹೀಗೆ ಅಂಬಿಕಾಪತಿಗೆ ಸೇರಿದ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ತಲಾಷ್ ನಡೆಸಿದ್ದಾರೆ. ಅಂದ ಹಾಗೆ ಈ 42 ಕೋಟಿ ರೂಪಾಯಿ ಸಿಕ್ಕಿರೋದು ಅಂಬಿಕಾಪತಿಯ ಸಂಬಂಧಿ ಪ್ರದೀಪ್ ಎಂಬುವರ ಮನೆಯಲ್ಲಿ ಅನ್ನೋ ಮಾಹಿತಿ ಲಭ್ಯವಾಗಿದೆ. ಗುತ್ತಿಗೆದಾರ ಅಂಬಿಕಾಪತಿ(Ambikapati) ಕೋಟೆಯಲ್ಲಿ ಸಿಕ್ಕಿದ 42 ಕೋಟಿ ರೂಪಾಯಿಯ ಸುತ್ತ ನೂರೆಂಟು ಪ್ರಶ್ನೆಗಳು ಎದ್ದಿವೆ. ದುಡ್ಡಿನ ರಾಶಿಯನ್ನು ಐಟಿ ಪತ್ತೆ ಮಾಡ್ತಿದ್ದಂತೆ ಈ ದುಡ್ಡಿನ ಅಸಲಿ ಮಾಲಿಕ ಯಾರು ಅನ್ನೋ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿದೆ. ಇದು ಬೆಂಗಳೂರಿನ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ಹಣ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಇದನ್ನೂ ವೀಕ್ಷಿಸಿ:  ಆಂಧ್ರಕ್ಕೆ ಸಮರ್ಪಕ ನೀರು ರಾಜ್ಯದ ರೈತರಿಗೆ ಕಣ್ಣೀರು: ಮೆಣಸಿನಕಾಯಿ, ಹತ್ತಿ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more