Dec 4, 2024, 4:31 PM IST
ಬೆಂಗಳೂರು: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಮ್ಮ ನಂದಿನಿ ಹಾಲನ್ನು ಮಾರಾಟ ಮಾಡಬೇಕೆನ್ನುವ ಕನಸು ಇತ್ತು. ಕಳೆದ 29ನೇ ತಾರೀಖು ಆ ಕನಸು ನನಸಾಗಿದೆ. ಈಗ ಐದರಿಂದ ಆರು ಸಾವಿರ ಲೀಟರ್ ಹಾಲು ಮಾರಾಟ ಆಗುತ್ತಿದೆ. ಇನ್ನೊಂದು ತಿಂಗಳಲ್ಲಿ ಒಂದು ಲಕ್ಷ ಲೀಟರ್ ಹಾಲು ಮಾರಾಟ ಆಗುವ ನಿರೀಕ್ಷೆಯಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿದ್ದಾರೆ.
ಬೇರೆ ಬ್ರ್ಯಾಂಡ್‌ಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಬ್ಯುಸಿನೆಸ್‌ನಲ್ಲಿ ಯಾವಾಗಲೂ ಸ್ಪರ್ಧೆ ಇದ್ದೇ ಇರುತ್ತದೆ. ನಮಗೆ ಗ್ರಾಹಕರ ಬೇಡಿಕೆಯಿದೆ. ಅದಕ್ಕೆ ತಕ್ಕಂತೆ ಪೂರೈಕೆ ಮಾಡುತ್ತೇವೆ ಎಂದು ಭೀಮಾ ನಾಯಕ್ ಹೇಳಿದ್ದಾರೆ.
ಬ್ರಹ್ಮಗಂಟು ನಟಿ ಶೋಭಿತಾಗೆ ಕಂಟಕವಾಯ್ತಾ ಅದೊಂದು ಕಂಡೀಶನ್?
ಇನ್ನು ಅಮೂಲ್ ಹಾಗೂ ನಂದಿನಿ ಮರ್ಜ್ ಆಗಲಿದೆಯೇ ಎನ್ನುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಇದು ಹಿಂದೆ ಅಮಿತ್ ಷಾ ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ಯಾವುದೋ ಒಂದು ಮಾತಿನ ಹಿನ್ನೆಲೆಯಲ್ಲಿ ಈ ವದಂತಿ ಸೃಷ್ಠಿಯಾಗಿತ್ತು. ಇದೆಲ್ಲವೂ ಕೇವಲ ವದಂತಿಯಷ್ಟೇ, ಆ ರೀತಿ ನಂದಿನಿ ಹಾಗೂ ಅಮೂಲ್ ವಿಲೀನ ಮಾಡಲು ಸಾಧ್ಯವೇ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.