Jul 3, 2023, 9:34 PM IST
ಚಾಮರಾಜನಗರ (ಜು.03): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ. ಒಂದು ಕಡೆ ನಾಗರಹೊಳೆ, ಮತ್ತೊಂದು ಕಡೆ ತಮಿಳುನಾಡಿನ ಮುದುಮಲೈ, ಇನ್ನೊಂದು ಕಡೆ ಕೇರಳದ ವೈಯನಾಡಿನಿಂದ ಸುತ್ತುವರಿದಿರುವ ವನ್ಯಜೀವಿ ತಾಣ. ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಪೋಷಿಸುತ್ತಿರುವ ಈ ಬಂಡೀಪುರ ಅರಣ್ಯ ಪ್ರದೇಶ ಹುಲಿ ಜೊತೆ ಆನೆ, ಚಿರತೆ, ಸೀಳುನಾಯಿ, ಕಾಡುಕೋಣ, ಜಿಂಕೆಗಳ ಜೊತೆಗೆ ನವಿಲು, ಹದ್ದು, ಜೇನುಗಳಂತಹ ವೈವಿಧ್ಯಮಯ ಜೀವಸಂಕುಲಗಳನ್ನು ಹೊಂದಿದಂತಹ ಕಾಡು. ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಮತ್ತು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಸುಮಾರು 2 ಲಕ್ಷ 25 ಸಾವಿರ ಎಕರೆಗಳಷ್ಟು ಪ್ರದೇಶಗಳಲ್ಲಿ ಬಂಡೀಪುರ ಅರಣ್ಯ ಹಬ್ಬಿಕೊಂಡಿದ್ದು, 190ಕ್ಕೂ ಹೆಚ್ಚು ಹಳ್ಳಿಗಳಿಂದ ಸುತ್ತುವರಿದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.