Feb 16, 2022, 2:30 PM IST
ಬೆಂಗಳೂರು (ಫೆ. 16): ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಹೆಮ್ಮೆ. ಕೋರ್ಟ್ ಹೆಸರನ್ನು ಹೇಳಿ ನಮ್ಮ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದೀರಿ. ನಾವು ಓದೋದು ಬಿಡಲ್ಲ, ಪ್ರಾಣ ಹೋದರೂ ಹಿಜಾಬ್ ತೆಗೆಯಲ್ಲ' ಎಂದು ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯೊಬ್ಬಳು ಆಕ್ರೋಶಭರಿತಳಾಗಿ ಮಾತನಾಡಿದ್ದಾರೆ.
ರಾಷ್ಟ್ರಧ್ವಜಕ್ಕೆ ಅವಮಾನ, ಈಶ್ವರಪ್ಪ ಮೇಲೆ ಯಾಕಿಲ್ಲ ಕ್ರಮ: ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ
'ಕೋರ್ಟ್ ಆದೇಶವನ್ನು ಲೆಕ್ಕಿಸದೇ ಇದ್ದವರನ್ನು ನಮ್ಮ ಪೊಲೀಸರು ಲೆಕ್ಕಿಸಲ್ಲ. ಅವರನ್ನು ತರಗತಿಯೊಳಗೆ ಸೇರಿಸುವುದಿಲ್ಲ. ಆಡಳಿತ ಮಂಡಳಿ, ಶಿಕ್ಷಕರ ಹಿಂದೆ ಪೊಲೀಸರಿದ್ದಾರೆ. ಗಲಾಟೆ ಮಾಡುವವರು, ರಸ್ತೆಯಲ್ಲಿಯೇ ಇರಲಿ. ತರಗತಿಯೊಳಗೆ ಅವಕಾಶವಿಲ್ಲ' ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.
ಡಿವಿಸ್ ಕಾಲೇಜಿನ ( DVS College)ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿ ಕಾಲೇಜಿಗೆ ಬಂದಿದ್ದಾರೆ. ತರಗತಿಗೆ ಅವಕಾಶ ಕೊಡದೇ ಇದ್ದಾಗ ವಾಪಸ್ಸಾಗಲು ರೆಡಿಯಾಗಿದ್ದಾರೆ. ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಾಲೇಜು ಆವರಣಕ್ಕೆ ಪೊಲೀಸರು ಆಗಮಿಸಿದ್ದಾರೆ.