Oct 13, 2022, 4:18 PM IST
ಬೆಂಗಳೂರು (ಅ.13): ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ನಾವು ಉತ್ತಮ ತೀರ್ಪು ನಿರೀಕ್ಷೆ ಮಾಡಿದ್ದೆವು. ಹಾಗಿದ್ದರೂ ಸುಪ್ರೀಂ ಕೋರ್ಟ್‌ನ ಒಬ್ಬರು ನ್ಯಾಯಾಧೀಶರು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದ್ದಾರೆ.
ವಿಸ್ತ್ರತ ಪೀಠಕ್ಕೆ ಇನ್ನು ಪ್ರಕರಣ ಹೋಗಲಿದೆ. ಅದರ ವಿಚಾರಣೆಯನ್ನು ಗಮನಿಸುತ್ತೇವೆ. ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸುಪ್ರೀಂ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಪ್ರತ್ಯೇಕ ತೀರ್ಪು ಬಂದ ಹಿನ್ನಲೆಯಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಮಾನ್ಯವಾಗಿರಲಿದೆ ಎಂದು ಬಿಸಿ ನಾಗೇಶ್ ಹೇಳಿದ್ದಾರೆ.
Hijab Case: ಹಿಜಾಬ್ ಕುರಿತು ಬಾರದ ತೀರ್ಪು, ವಿಸ್ತ್ರತ ಪೀಠಕ್ಕೆ ಪ್ರಕರಣ
ಕರ್ನಾಟಕ ಹೈಕೋರ್ಟ್ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಅನ್ನು ನಿಷೇಧಿಸಿದೆ. ಅದನ್ನೇ ನಾವು ಪಾಲನೆ ಮಾಡಲಿದ್ದೇನೆ. ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ನಮ್ಮ ನಿಯಮವನ್ನು ಪಾಲನೆ ಮಾಡುತ್ತೇವೆ. ವಿಸ್ತ್ರತ ಪೀಠ ಕೂಡ ಪ್ರಕರಣದ ಸಮಗ್ರ ವಿಚಾರಣೆಯನ್ನು ನಡೆಸುವ ವಿಶ್ವಾಸವಿದೆ ಎಂದಿದ್ದಾರೆ.