Hijab Case: ಮುಸ್ಲಿಂ ಪುರುಷ ಪ್ರಧಾನ ವ್ಯವಸ್ಥೆಯ ಮಾನಸಿಕತೆ ಬದಲಾಯಿಸುವ ಅವಕಾಶವಿತ್ತು!

Oct 13, 2022, 4:44 PM IST

ಬೆಂಗಳೂರು (ಅ.13): ಸುಪ್ರೀಂ ಕೋರ್ಟ್‌ನ ಭಿನ್ನ ತೀರ್ಪಿನಿಂದ ನನಗೆ ನಿರಾಶಾದಾಯಕವಾಗಿದೆ. ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ ಆಗಲಿ ದೇಶದ ಯಾವುದೇ ಕೋರ್ಟ್‌ ಆಗಲಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡುತ್ತವೆ. ಮುಸ್ಲಿಂ ಹೆಣ್ಣು ಮಕ್ಕಳ ಸ್ಥಿತಿಯ ಬಗ್ಗೆ ಇನ್ನಷ್ಟು ಆಲೋಚಿಸಬೇಕಿತ್ತು ಅಂತಾ ನನಗನಿಸುತ್ತದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಹೈಕೋರ್ಟ್‌ನ ಆದೇಶವನ್ನು ನ್ಯಾಯಮೂರ್ತಿ ವಜಾ ಮಾಡಿರುವುದು ನಿಜಕ್ಕೂ ಬೇಸರದ ವಿಚಾರ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಬಹುಶಃ ಸೇಫ್‌ ಗೇಮ್‌ ಪ್ಲೇ ಮಾಡಿರಬಹುದು. ಒಂದೋ ವಿಸ್ತ್ರತ ಪೀಠದಲ್ಲಿ ಹಚ್ಚಿನ ಚರ್ಚೆ ಆಗಬೇಕು ಎಂದು ಬಯಸಿರಬಹುದು ಅಥವಾ ವಿಷಯವನ್ನು ಇನ್ನಷ್ಟು ದಿನಗಳ ಕಾಲ ದೂಡಿದರೆ ಅದು ಸಾಯಬಹುದು ಎನ್ನುವ ಅಂದಾಜು ಮಾಡಿರಬಹುದು ಎಂದಿದ್ದಾರೆ.

Hijab Case: ಹಿಜಾಬ್‌ ಕುರಿತು ಬಾರದ ತೀರ್ಪು, ವಿಸ್ತ್ರತ ಪೀಠಕ್ಕೆ ಪ್ರಕರಣ

ಹಿಜಾಬ್‌ ವಿಚಾರ ಉದ್ಭವವಾದಾಗ ಇದ್ದ ಬಿಸಿ ಈಗ ಇಲ್ಲ. ಮುಸ್ಲಿಂ ಪುರುಷರ ಪ್ರಧಾನ ವ್ಯವಸ್ಥೆಯ ಮಾನಸಿಕ ಸ್ಥಿತಿಯನ್ನು ಬದಲಾಯಿಸುವ ಅವಕಾಶವಿತ್ತು. ಯಾಕೆಂದರೆ, ಈಗ ಹಿಜಾಬ್‌ ವಿಚಾರ ಮಾತನಾಡುವ ಇವರು ನಾಳೆ ಇದೇ ವಿಚಾರ ಇರಿಸಿಕೊಂಡು ಹೆಣ್ಣುಮಕ್ಕಳು ಬೀದಿಗೆ ಬರಬಾರದು ಎಂದು ಆದೇಶ ಮಾಡುತ್ತಾರೆ. ಅದನ್ನು ಬದಲಾಯಿಸುವ ಅವಕಾಶ ಕೋರ್ಟ್‌ ಎದುರಲ್ಲಿತ್ತು ಎಂದು ಹೇಳಿದ್ದಾರೆ.