ಉಕ್ಕಿ ಹರಿದ ನದಿಗಳು..ಕರುನಾಡಿಗೆ ಪ್ರಳಯದ ಭೀತಿ: ಇಂದು ಡಿಸಿಗಳ ಜೊತೆ ಸಿಎಂ ಸಭೆ

Jul 25, 2023, 9:36 AM IST

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆರಾಯನ(Rain) ಅಬ್ಬರ ಜೋರಾಗಿದೆ. ಕೆಲವು ಕಡೆ ರಸ್ತೆಗಳು ಮಾಯವಾದ್ರೆ, ಇನ್ನೂ ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಮಳೆ ಹಿನ್ನೆಲೆ ರಾಜ್ಯದ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೊಡಗು(Kodagu) ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನದಿ(Kaveri River) ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಇನ್ನೂ ಸಾಗರ-ಶಿವಮೊಗ್ಗ ಸಂಪರ್ಕಿಸುವ ರಸ್ತೆ ಮೇಲೆ ಮರಬಿದ್ದ ಹಿನ್ನೆಲೆ ಸಂಚಾರಕ್ಕೆ ತೊಂದರೆಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಿಂದ ಅಘನಾಶಿನಿ ನದಿ(Aghanashini River) ಉಕ್ಕಿ ಹರಿಯುತ್ತಿದೆ. ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ. ಸೂರು ಕಳೆದುಕೊಂಡವರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಚಂದ್ರ ಮಿಥುನ ರಾಶಿಯಲ್ಲಿದ್ದು, ಈ ರಾಶಿಯವರ ಶುಭಫಲಗಳು ಹೀಗಿವೆ..