Jul 19, 2024, 4:53 PM IST
ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ(Low-pressure area). ಅದರ ಇಂಪ್ಯಾಕ್ಟ್ ಅನ್ನೋ ಹಾಗೆ ರಾಜ್ಯದಲ್ಲಿ ಮುಂಗಾರು ಅಬ್ಬರಿಸ್ತಾ ಇದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯ(Rain) ಮುನ್ಸೂಚನೆ ಕೊಟ್ಟಿತ್ತು ರಾಜ್ಯ ಹವಾಮಾನ ಇಲಾಖೆ (Weather department). ಆ ಮುನ್ಸೂಚನೆ ನಿಜವಾಗಿಸೋಕೆ ರಣಮಳ ಸುರಿಯುತ್ತಲೇ ಇದೆ. ಅದರ ಪರಿಣಾಮವಾಗಿ ಕರಾವಳಿ ಜಿಲ್ಲೆಗಳಲ್ಲಿ, ಅಂದ್ರೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಮಳೆ ಅಬ್ಬರ ಈ ಕ್ಷಣಕ್ಕೂ ಮುಂದುವರೆದಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಹತ್ರ, ಚಲಿಸುತ್ತಿದ್ದ ಕಾರಿನ ಮೇಲೆನೇ ಏಕಾಏಕಿ ಗುಡ್ಡ ಕುಸಿದಿದೆ. ಕಾರಿನ ಮೇಲೆ ಭಾರೀ ಪ್ರಮಾಣದ ಮಣ್ಣಿನ ರಾಶಿ ಬಿದ್ದಿದ್ರಿಂದ, ಕಾರಿನಲ್ಲಿದ್ದವರಿಗೆ ಗಂಭೀರವಾಗಿಯೇ ಗಾಯಗಳಾಗಿದ್ದಾವೆ. ಇಂಥಾ ಅಪಾಯದ ಸೂಚನೆ ಇರೋದ್ರಿಂದಲೇ ಶಿರಾಡಿಘಾಟ್‌ನಲ್ಲಿ ಸಂಚಾರ ಸ್ಥಗಿತಗೊಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಳೆಯ ಅಬ್ಬರ ಜೋರಾಗೇ ಇದೆ. ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರೀತಿದೆ. ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಹೆಚ್ಚಳವಾಗಿರೋದ್ರಿಂದ, ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಜಿಲ್ಲಾಡಳಿತದಿಂದ ಸೂಚನೆ ಕೊಟ್ಟಿದಾರೆ.
ಇದನ್ನೂ ವೀಕ್ಷಿಸಿ: ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಗಳದ್ದೇ ದರ್ಬಾರ್: ಪಿಎಂ ಆವಾಸ್ ಯೋಜನೆಯಲ್ಲಿ ಭಾರೀ ಅವ್ಯವಹಾರ !