Harsha Murder case ಹರ್ಷಾ ಕೊಲೆ ಹಿಂದೆ PFI, SDPI ಕೈವಾಡವಿದ್ದರೆ ಬ್ಯಾನ್ ಮಾಡಿ, ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ!

Feb 22, 2022, 5:14 PM IST

ಬೆಂಗಳೂರು(ಫೆ.22): ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣ ರಾಜಕೀಯ ಗುದ್ದಾಟಕ್ಕೂ ಕಾರಣವಾಗಿದೆ. ಒಂದೆಡೆ ಈ ಕೊಲೆ ಹಿಂದೆ PFI, SDPI ಕೈವಾಡವಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊಲೆ ಹಿಂದೆ PFI, SDPI ಕೈವಾಡವಿದೆ ಅನ್ನೋ ಮಾಹಿತಿ ಇದ್ದರೆ, ಆಧಾರಗಳಿದ್ದರೆ ಖಂಡಿತವಾಗಿ ಈ ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಇದಕ್ಕೆ ನಮ್ಮ ತಕರಾರಿಲ್ಲ. ನಾವು ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ